ವಿಟ್ಲ: ಜನರ ಬಹುಕಾಲದ ಬೇಡಿಕೆಯಾಗಿದ್ದ ವಿಟ್ಲ- ಬೆಂಗಳೂರು ಮಧ್ಯೆಯ ಮಲ್ಟಿ ಆಕ್ಸಲ್ ಸರಕಾರಿ ಬಸ್ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಸಾರಿಗೆ ಸಂಸ್ಥೆ ಕಾಟಚಾರಕ್ಕಾಗಿ ಗ್ಲಾಸ್ ಒಡೆದ ಬಸ್ ಅನ್ನು ನೀಡಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಟ್ಲ- ಬೆಂಗಳೂರು ಮಧ್ಯೆಯ ಮಲ್ಟಿ ಆಕ್ಸಲ್ ಸರಕಾರಿ ಬಸ್ ಸಂಚಾರ ಆರಂಭವಾಗಬೇಕೆಂಬುದು ವಿಟ್ಲ ಅಸುಪಾಸಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದು,ಅದರಂತೆ ನಿನ್ನೆ ಮೊದಲ ಬಸ್ ಸಂಚಾರ ಪ್ರಾರಂಭಗೊಂಡಿತು ಹಲವು ಗಣ್ಯರ ಸಮ್ಮುಖದಲ್ಲಿ ಮಂಗಿಲ ಪದವು ಜಂಕ್ಷನ್ ನಲ್ಲಿ ಅದ್ದೂರಿ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು ಆದರೆ ಮೊದಲ ದಿನವೇ ಗ್ಲಾಸ್ ಒಡೆದ ಬಸ್ ನೀಡಿದ್ದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಅದೇ ರೀತಿ ಬಸ್ ಸಂಚಾರ ಆರಂಭವಾಗಿ ಒಂದೆರಡು ತಿಂಗಳ ಕಾಲ ಓಡಾಡಿ ಕಲೆಕ್ಷನ್ ಆಗ್ತಿಲ್ಲ ಎಂಬ ನೆಪದಲ್ಲಿ ಸಂಚಾರ ನಿಲ್ಲಿಸದೇ ಪ್ರತಿನಿತ್ಯ ಓಡಾಡಲಿ ಎಂಬುದು ಜನ ಸಾಮಾನ್ಯರ ಬಯಕೆಯಾಗಿದೆ.