ಬೆಳ್ತಂಗಡಿ: ಬೇಲೂರಿನಲ್ಲಿ ನಡೆದ ಅಪಘಾತದಲ್ಲಿ ಬೆಳ್ತಂಗಡಿ ತಾಲೂಕಿನ ಪೆರಾಲ್ದರಕಟ್ಟೆ ನಿವಾಸಿ ಕೂಲಿ ಕಾರ್ಮಿಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಅಪಘಾತದಲ್ಲಿ ಕಾರಿನಲ್ಲಿ ಸಹಪ್ರಯಾಣಿಕರಾಗಿದ್ದ ಇನ್ನೂ ಮೂವರಿಗೆ ಹೆಚ್ಚಿನ ಗಾಯಗಳಾಗಿವೆ ಎಂದೂ ತಿಳಿದು ಬಂದಿದೆ. ಮೃತರಾದ ದುರ್ದೈವಿಯನ್ನು ಪೆರಾಲ್ದರಕಟ್ಟೆಯ ಶರೀಫ್ ಎಂದು ಗುರುತಿಸಲಾಗಿದೆ.
ಗಾಯಾಗೊಂಡವರನ್ನು ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ನೂರ್ ಮುಹಮ್ಮದ್, ಬಳಂಜದ ಅಝೀಝ್ ಹಾಗೂ ಕಕ್ಕಿಂಜೆಯ ಗಾಂಧಿ ನಗರ ನಿವಾಸಿ ಸಲೀಂ ಎಂಬವರಾಗಿದ್ದಾರೆ.
ಅಲ್ಟೊ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರೆಲ್ಲರೂ ಸಂಬಂಧಿಗಳು ಹಾಗೂ ಸ್ನೇಹಿತರಾಗಿದ್ದು ಗಾರೆ ಕೆಲಸ, ಮೇಸ್ತ್ರಿ ಕೆಲಸ ಮಾಡಿಕೊಂಡವರಾಗಿದ್ದಾರೆ. ಒಟ್ಟಿಗೆ ಜೊತೆಯಾಗಿ ಇವರು ಝಿಯಾರತ್ ಗಾಗಿ ಆ ಭಾಗಕ್ಕೆ ತೆರಳಿ ವಾಪಾಸಾಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ಲಭಿಸಿದೆ.