ಬೆಂಗಳೂರು: ಮಂಗಳ ಮುಖಿಯರ ಬಹುದಿನದ ಕನಸು ನನಸಾಗಿದ್ದು, ಇನ್ನು ಮುಂದೆ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರೂ ಕೆಲಸ ಮಾಡಬಹುದಾಗಿದೆ. ಕರ್ನಾಟಕ ಪೊಲೀಸ್ ಇಲಾಖೆಯಿಂದ ಮಂಗಳಮುಖಿಯರಿಗೆ ಕೆಲಸಕ್ಕೆ ಅರ್ಜಿ ಸಲ್ಲಿಸಲು ಆಹ್ವಾನ ಮಾಡಲಾಗಿದೆ.
ರಾಜ್ಯದಲ್ಲೇ ಪ್ರಪ್ರಥಮ ಬಾರಿ ಪೊಲೀಸ್ ಇಲಾಖೆಯಲ್ಲಿ ಮಂಗಳಮುಖಿಯರಿಗೆ ಕೆಲಸಕ್ಕೆ ಆಹ್ವಾನ ಮಾಡಲಾಗಿದೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ನೀಡುವಂತೆ ಮಂಗಳಮುಖಿಯರು ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ. ಮಂಗಳಮುಖಿಯರ ಬೇಡಿಕೆಗೆ ಅಸ್ತು ಎಂದಿದೆ. ಈ ಹಿನ್ನೆಲೆ ಮಂಗಳಮುಖಿಯರಿಗೆ ಮೀಸಲಾತಿ ನೀಡಿದೆ.
ಪೊಲೀಸ್ ಇಲಾಖೆ ನೀಡಿರೋ ಮಾಹಿತಿಯ ಅನ್ವಯ, ಸದ್ಯ 70 ಸಬ್ಇನ್ಸ್ಪೆಕ್ಟರ್ ಪೋಸ್ಟ್ಗಳ ನೇಮಕಕ್ಕೆ ಅರ್ಜಿ ಆಹ್ವಾನ ಮಾಡಿದೆ. www.recruitment.ksp.gov.in ವೆಬ್ಸೈಟ್ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಲಾಗಿದೆ.