ಸುಳ್ಯ: ಮನೆಯೊಂದರಲ್ಲಿ ಮೂವರು ಬಾಲಕರು ಫೆವಿಕಲ್ ಗಮ್ ವಾಸನೆ ಸೇವನೆ ಮಾಡುತ್ತಿದ್ದುದನ್ನು ಗಮನಿಸಿದ ಸ್ಥಳಿಯರು ಬಾಲಕರನ್ನು ಸುಳ್ಯ ಪೊಲೀಸರಿಗೊಪ್ಪಿಸಿದ ಘಟನೆ ಜಯನಗರ ಎಂಬಲ್ಲಿ ನಡೆದಿದೆ.
ಅಮಲಿಗಾಗಿ ಅಪ್ರಾಪ್ತ ಬಾಲಕರು ಮಾದಕ ನಶೆಯ ಮೊರೆ ಹೋಗಿದ್ದರೆನ್ನಲಾಗಿದ್ದು, ಬಾಲಕರನ್ನು ವಿಚಾರಣೆ ಮಾಡಿದ ಪೊಲೀಸರು ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿ ಕಳುಹಿಸಿ ಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.