ಮಂಗಳೂರು: ಆ್ಯಂಬುಲೆನ್ಸ್ ಒಂದು ರಿವರ್ಸ್ ಚಲಿಸುವ ವೇಳೆ ನಿಯಂತ್ರಣ ತಪ್ಪಿ ಎಂಟು ಅಡಿ ಎತ್ತರದಿಂದ ಉರುಳಿ ಬಿದ್ದ ಘಟನೆ ನಗರದ ಫಳ್ನೀರ್ ನ ಖಾಸಗಿ ಆಸ್ಪತ್ರೆ ಬಳಿ ನಡೆದಿದೆ.
ಘಟನೆಯ ವೇಳೆ ಆ್ಯಂಬುಲೆನ್ಸ್ ನಲ್ಲಿ ಚಾಲಕ ಒಬ್ಬನೇ ಇದ್ದು, ಸಣ್ಣಪುಟ್ಟ ಗಾಯಗಳಾಗಿದೆ.
ರಿವರ್ಸ್ ತೆಗೆಯುತ್ತಿದ್ದ ವೇಳೆ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಆವರಣ ಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಆವರಣ ಗೋಡೆ ಕುಸಿದು ಆ್ಯಂಬುಲೆನ್ಸ್ ಸುಮಾರು ಎಂಟು ಅಡಿ ಕೆಳಗೆ ಉರುಳಿ ಬಿದ್ದಿದೆ. ಇದರಿಂದ ಕೆಳಭಾಗದಲ್ಲಿ ನಿಲ್ಲಿಸಿದ್ದ 2-3 3 ಬೈಕ್‍ಗಳು ಜಖಂಗೊಂಡಿವೆ.