ಪುತ್ತೂರು: ಸುಮಾರು 8 ವರ್ಷಗಳ ಹಿಂದೆ ನರಿಮೊಗರು ಗ್ರಾಮದ ಶೆಟ್ಟಿಮಜಲಿನಲ್ಲಿ ವಾಸ್ತವ್ಯವಿದ್ದ ರಾಜರಾಮ ಶೆಣೈ ಶೆಟ್ಟಿಮಜಲು ರವರು ಡಿ.27 ರಂದು ಮೂಡಬಿದ್ರೆಯ ಇರುವೈಲು ಮನೆಯಲ್ಲಿ ನಿಧನರಾದರು.
ರಾಜರಾಮ ಶೆಣೈ ಅವರು ನರಿಮೊಗರು ಶೆಟ್ಟಿಮಜಲಿನಲ್ಲಿ ದೇವಾರಾಧನೆಯ ಮೂಲಕ ಭಕ್ತರಿಗೆ ಪ್ರಶ್ನಾ ಪರಿಹಾರ ಕಾರ್ಯ ನಡೆಸುತ್ತಿದ್ದು, ಬಳಿಕದ ಬೆಳವಣಿಗೆಯಲ್ಲಿ ಅವರು ಮೂಡಬಿದ್ರೆ ಉರುವೈಲು ಎಂಬಲ್ಲಿ ವಾಸ್ತವ್ಯ ಹೊಂದಿದ್ದರು. ಅಲ್ಲಿ ಮನೆಯಲ್ಲೇ ಪ್ರಶ್ನಾ ಚಿಂತನೆ ನಡೆಸುತ್ತಿದ್ದರೆನ್ನಲಾಗಿದೆ.
ಮೃತರು ತಂದೆ ಸಂಜೀವ ಶೆಣೈ, ಪತ್ನಿ ಜ್ಯೋತಿ, ಪುತ್ರ ನಂದನ್, ಪುತ್ರಿ ನಂದಿನಿ ಮತ್ತು ಇಬ್ಬರು ಸಹೋದರರನ್ನು ಅಗಲಿದ್ದಾರೆ.