ಬೆಂಗಳೂರು: ಎಲ್ಲರೂ ಕೊರೊನಾ ನಿಯಮಗಳಿಗೆ ಸಹಕಾರ ಕೊಡಬೇಕು ಇಲ್ಲದಿದ್ರೆ ಪಶ್ಚಿಮ ಬಂಗಾಳ, ದೆಹಲಿಯಂತೆ ಲಾಕ್ಡೌನ್ ಮೊರೆ ಹೋಗಬೇಕಾಗುತ್ತದೆ ಎಂದು ಸಚಿವ ಅಶೋಕ್ ಎಚ್ಚರಿಕೆಯನ್ನ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು.. ರಾಜ್ಯದಲ್ಲಿ ಒಮಿಕ್ರಾನ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ.. ಮತ್ತೊಂದು ಕಡೆ ಕೊರೊನಾ ಸೋಂಕಿನ ಪ್ರಮಾಣವೂ ತೀವ್ರಗತಿಯಲ್ಲಿ ಏರಿಕೆ ಕಾಣ್ತಿದೆ. ಈಗಾಗಲೇ ವೆಸ್ಟ್ ಬೆಂಗಾಲ್, ಮಹಾರಾಷ್ಟ್ರದಲ್ಲಿ ಮಿತಿ ಮೀರಿದ್ದು, ಕಠಿಣ ನಿಯಮ ಜಾರಿ ಆಗ್ತಿದೆ. ಮೂರನೇ ಅಲೆ ಬರೋದು ನಿಶ್ಚಿತ ಅನ್ನೋ ವಾತಾವರಣ ಕ್ರಿಯೇಟ್ ಆಗಿಬಿಟ್ಟಿದೆ. ಅದರಲ್ಲಿ ರೆಡ್ಝೋನ್ನಲ್ಲಿ ಬೆಂಗಳೂರು ಕೂಡ ಇದೆ. ಹೀಗಾಗಿ ಬೆಂಗಳೂರನ್ನ ಅಲರ್ಟ್ ಮಾಡಬೇಕಾಗಿದೆ ಎಂದರು.
ಬೆಂಗಳೂರಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನ ವಿಧಿಸಿದ್ರೆ, ಆಸ್ಪತ್ರೆಗೆ ದಾಖಲಾಗೋದನ್ನ, ಜನ ಸಾವನ್ನ ನಾವು ತಡೆಯಬಹುದು. ಈ ಎಲ್ಲಾ ದೃಷ್ಟಿಯಿಂದ ನಾವು ಮಹತ್ವದ ನಿರ್ಧಾರಗಳನ್ನ ತೆಗೆದುಕೊಳ್ಳಬೇಕಿದೆ. ಜನವರಿ 7ನೇ ತಾರಿಖಿನೊಳಗೆ ನಾವು ಟಫ್ ರೂಲ್ಸ್ ಜಾರಿ ಬಗ್ಗೆ ನಿರ್ಧಾರ ಮಾಡಬೇಕಿದೆ ಎಂದರು.
ತಜ್ಞರು ಏನು ಹೇಳ್ತಾರೆ, ಅದನ್ನ ನಾವು ಯಥಾವತ್ತಾಗಿ ಜಾರಿ ಮಾಡ್ತೇವೆ. ಯಾಕಂದ್ರೆ ಕಳೆದ ಬಾರಿ ಸಾವು-ನೋವುಗಳನ್ನ ನೋಡಿ ಅನುಭವಕ್ಕೆ ಬಂದಿದೆ. ಹೀಗಾಗಿ ಸೂಕ್ತ ತಯಾರಿ ಮಾಡಿಕೊಳ್ತೇವೆ. ಅದಕ್ಕಾಗಿ ವಿಶೇಷ ಸಭೆ ಮಾಡ್ತೇವೆ. ಎಲ್ಲರೂ ಕೂಡ ಟಫ್ ರೂಲ್ಸ್ಗೆ ಸಹಕಾರ ಕೊಡಬೇಕು. ಇಲ್ಲದಿದ್ರೆ, ನಾವೂ ಕೂಡ ದೆಹಲಿ, ವೆಸ್ಟ್ ಬೆಂಗಾಲ್, ಬಾಂಬೆ ರೀತಿ ಲಾಕ್ಡೌನ್ಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.