ಬೆಳ್ಳಾರೆ: ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕನಿಗೆ ಹಲ್ಲೆಗೈದವನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಳ್ಯದಿಂದ ಬೆಳ್ಳಾರೆ ಕಡೆಗೆ ಹೋಗುವ ಬಸ್ಸಿಗೆ ಐವರ್ನಾಡಿನಲ್ಲಿ ಪುರುಷೋತ್ತಮ ಎಂಬವರು ಬಸ್ ಹತ್ತಿದರೆನ್ನಲಾಗಿದೆ. ಬಸ್ಸಿನಲ್ಲಿ ನಿರ್ವಾಹಕ ಟಿಕೆಟ್ ನೀಡುವಾಗ ಪ್ರಯಾಣಿಕನು 100 ರೂ. ನೋಟನ್ನು ನೀಡಿದ್ದು, ನಿರ್ವಾಹಕ 100 ರೂ. ಪಡೆದುಕೊಂಡು ಚಿಲ್ಲರೆ ಮತ್ತೆ ಕೊಡುವುದಾಗಿ ಟಿಕೆಟ್ ಹಿಂಬದಿಯಲ್ಲಿ 90 ಕೊಡಲು ಬಾಕಿ ಇದೆ ಎಂದು ಬರೆದರೆನ್ನಲಾಗಿದೆ.
ಬೆಳ್ಳಾರೆ ಬಸ್ ಸ್ಟಾಂಡ್ ಬರುವಾಗ ಪ್ರಯಾಣಿಕರು ಚಿಲ್ಲರೆಯನ್ನು ನಿರ್ವಾಹಕನ ಜೊತೆ ಕೇಳಿದ್ದು, ನಿರ್ವಾಹಕನಲ್ಲಿ ಚಿಲ್ಲರೆ ಇಲ್ಲದೆ ಪಕ್ಕದ ಅಂಗಡಿಯಲ್ಲಿ ಕೇಳಿ ಬರುವುದಾಗಿ ಹೇಳಿದ್ದು, ಅಂಗಡಿಯಲ್ಲಿ ಚಿಲ್ಲರೆ ಪಡೆದು ಬರುವಾಗ ತಡವಾಯಿತೆನ್ನಲಾಗಿದೆ. ಪುರುಷೋತ್ತಮರಿಗೆ ಬೆಳ್ಳಾರೆಯಿಂದ ಪುತ್ತೂರು ಹೋಗಲಿಕ್ಕಿದ್ದು ಆಗಲೇ ಬಸ್ಟೇಂಡ್ ನಿಂದ ಪುತ್ತೂರು ಬಸ್ ಹೊರಟಿದ್ದು ಇವರಿಗೆ ಚಿಲ್ಲರೆ ಸಿಗುವಾಗ ಬಸ್ ತಪ್ಪಿತೆನ್ನಲಾಗಿದೆ.
ಕೋಪಗೊಂಡ ಪ್ರಯಾಣಿಕ ನಿರ್ವಾಹಕನ ಜೊತೆ ಮಾತಿಗಿಳಿದಿದ್ದು, ಮಾತಿಗೆ ಮಾತು ಬೆಳೆದು ನಿರ್ವಾಹಕನ ಮೇಲೆ ಹಲ್ಲೆ ನಡೆಸಿದ್ದಾರೆಂದು ದೂರಲಾಗಿದೆ. ಈ ಬಗ್ಗೆ ಬಸ್ ಕಂಡಕ್ಟರ್ ಪ್ರಯಾಣಿಕನ ಮೇಲೆ ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ ತಿಳಿದು ಬಂದಿದೆ.