ಕುಪ್ಪೆಪದವು: ಮಂಗಳೂರು ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ರೇವತಿ ಅವರಿದ್ದ ಪೊಲೀಸ್ ಜೀಪ್ ಎಡಪದವು ವಿವೇಕಾನಂದ ಜೂನಿಯರ್ ಕಾಲೇಜು ಮುಂಭಾಗದಲ್ಲಿರುವ ಬಸ್ ಸ್ಟಾಂಡ್ ಗೆ ನುಗ್ಗಿದ ಘಟನೆ ಜ.3 ರಂದು ನಡೆದಿದೆ.
ಅಪಘಾತದಲ್ಲಿ ಇನ್ಸ್ಪೆಕ್ಟರ್ ರೇವತಿ ಅವರ ಕೈಗೆ ಗಾಯವಾಗಿದ್ದು, ಘಟನೆ ನಡೆಯುತ್ತಿದ್ದಂತೆ ಧಾವಿಸಿ ಸ್ಥಳೀಯರು ರೇವತಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದು, ಅಪಘಾತದಲ್ಲಿ ಪೊಲೀಸ್ ಜೀಪ್ ಜಖಂಗೊಂಡಿದ್ದು ಬಸ್ ಸ್ಟಾಂಡ್ ಪುಡಿ ಪುಡಿಯಾಗಿದೆ ಎಂದು ತಿಳಿದು ಬಂದಿದೆ.