ಚಿಕ್ಕಮಗಳೂರು: ತಾಯಿಯಿಂದ ದೂರವಾಗಿದ್ದ ಮಗಳು ಬರೋಬ್ಬರಿ 22 ವರ್ಷದ ಬಳಿಕ ತಾಯಿಯ ಮಡಿಲು ಸೇರಿದ ಅಪರೂಪದ ಘಟನೆಗೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮ ಸಾಕ್ಷಿಯಾಗಿದೆ.
22 ವರ್ಷದ ಬಳಿಕ ತಾಯಿ ಮಡಿಲು ಸೇರಿದ ಮಗಳು ಕೇರಳದ ನೆಲ್ಲಮಣಿಯ ಸಾಜಿ ಎಂಬ ಯುವಕನೊಂದಿಗೆ ವಿವಾಹವಾಗಿ ಜೀವನ ನಡೆಸುತ್ತಿದ್ದರು. ಈ ವೇಳೆ ತನ್ನ ತಾಯಿಯನ್ನು ಭೇಟಿಯಾಗಬೇಕೆಂಬ ಬಯಕೆ ಯುವತಿಗೆ ಬಂದಿದ್ದು, ಕಳೆದ 3 ವರ್ಷದಿಂದ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಇತ್ತೀಚಿಗೆ ಈ ಕುರಿತು ಮಂಗಳೂರಿನ ಫಿಶ್ಮೋಣು, ಮುಸ್ತಾಫರ ಬಳಿ ಅಂಜಲಿ ಹಾಗೂ ಪತಿ ಸಾಜಿ ಹೇಳಿಕೊಂಡಿದ್ದರು.
ಅವರ ಸಹಾಯದಿಂದ ಮೂಡಿಗೆರೆ ಸುತ್ತಮುತ್ತ ಅಂಜಲಿ ತಮ್ಮ ಪತಿಯೊಂದಿಗೆ ತಾಯಿಗಾಗಿ ಹುಡಕಾಟ ಆರಂಭಿಸಿದ್ದರು. ಕೊನೆಗೂ ತಾಯಿಯನ್ನು ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಮೂಡಿಗೆರೆಯ ಮುದ್ರೆ ಮನೆ ಗ್ರಾಮದಲ್ಲಿ ಅಂಜಲಿ ತಾಯಿ ವಾಸಿಸುತ್ತಿದ್ದರು. ಬರೋಬ್ಬರಿ 22 ವರ್ಷಗಳ ಬಳಿಕ ತಾಯಿಯನ್ನು ಕಾಣುತ್ತಿದ್ದಂತೆ ಅಂಜಲಿತಬ್ಬಿ ಕಣ್ಣೀರಿಟ್ಟಿದ್ದಾರೆ. ಈ ದೃಶ್ಯಗಳನ್ನು ಕಂಡ ಸ್ಥಳೀಯರ ಕಣ್ಣಿನಲ್ಲೂ ನೀರು ಜಿನುಗಿತ್ತು.