ಪುತ್ತೂರು: ‘ಕಾಂಗ್ರೆಸ್ ಕಳೆದ 75 ವರ್ಷಗಳಿಂದಲೂ ಗೂಂಡಾಗಿರಿಯನ್ನೇ ಮಾಡುತ್ತಾ ಬಂದಿದೆ. ಅವರು ಯಾವ ಕೆಲಸವನ್ನು ಮಾಡುವುದಿಲ್ಲ, ಮಾಡುವವರನ್ನು ಬಿಡುವುದಿಲ್ಲ, ಯಾಕೇಂದರೆ ಅವರ ಸಂಸ್ಕೃತಿ ಅದೇ ರೀತಿಯಾಗಿದೆ ಎಂದು ಸಚಿವ ಎಸ್.ಅಂಗಾರ ರವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು’.
‘ನನ್ನ 56 ವರ್ಷಗಳ ಅನುಭವದಲ್ಲಿ ಕಾಂಗ್ರೆಸ್ ಬಗ್ಗೆ ನಾನು ಸುಮಾರು ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಕಾಂಗ್ರೆಸ್ಸಿನ ಹಿಂದಿನ ಪರಿಸ್ಥಿತಿಗಳು ಹೇಗಿತ್ತು..?? ಆಗ ಏನೇನು, ಯಾವಾವ ರೀತಿಯಲ್ಲಿದ್ದರು, ಈಗ ಮತ್ತೆ ಅದನ್ನೇ ಮುಂದುವರೆಸುತ್ತಿದ್ದಾರೆ’ಎಂದರು.
‘ರಾಜ್ಯದಲ್ಲಿ ಈಗ ಆಗುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ನೋಡಿ ಮುಂದೆ ಅವರಿಗೆ ಭವಿಷ್ಯವಿಲ್ಲವೆಂಬಂತಾಗಿದೆ ಹೀಗಾಗಿ ಹತಾಶೆಗೊಂಡಿರುವ ಕಾಂಗ್ರೆಸ್ಸಿಗರು ಮತ್ತೆ ಗೊಂಡಾಗಿರಿಯನ್ನು ಆರಂಭಿಸಿದ್ದಾರೆ. ಅದಕ್ಕೆ ಸಾಕ್ಷಿ ನಿನ್ನೆ ರಾಮನಗರದಲ್ಲಿ ನಡೆದಂತಹ ಘಟನೆ. ಒಬ್ಬ ಚುನಾಯಿತ ಪ್ರತಿನಿಧಿ ಕಾರ್ಯಕ್ರಮಕ್ಕೆ ಸರಿಯಾಗಿ ಭಾಗವಹಿಸಬೇಕು. ಕಾರ್ಯಕ್ರಮಕ್ಕೆ ಸರಿಯಾಗಿ ಭಾಗವಹಿಸದೆ ಮತ್ತೆ ಕಾರ್ಯಕ್ರಮ ಪ್ರಾರಂಭವಾದ ನಂತರ ಅಲ್ಲಿ ಬಂದು ಗಲಾಟೆ ಮಾಡುವಂತಹ ಪರಿಸ್ಥಿತಿಯನ್ನು ಮಾಡಿದರೆ ಮುಂದೆ ಕಾರ್ಯಕ್ರಮವನ್ನು ಯಾವ ರೀತಿಯಲ್ಲಿ ಕೊಂಡೊಗುವಂತದ್ದು, ಕಾಂಗ್ರೆಸ್ ನವರು ಯಾವುದೇ ಕಾರ್ಯಕ್ರಮವಾಗಿರಲಿ ತಡವಾಗಿಯೇ ಬರುತ್ತಾರೆ ಮತ್ತೆ ಬಂದು ಜಗಳ ಮಾಡುತ್ತಾರೆ. ನಿನ್ನೆ ರಾಮನಗರದಲ್ಲಿ ನಡೆದ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ’ ಎಂದರು.