ಪುತ್ತೂರು: ನೂತನವಾಗಿ ನಿರ್ಮಾಣವಾಗಲಿರುವ ಸೂತ್ರಬೆಟ್ಟು ಸಾಲ್ಮರ ಆಶ್ರಯ ಕಾಲೋನಿಯ ಶ್ರೀ ವಾಸುಕಿ ನಾಗರಾಜ ದೇವರ ಸನ್ನಿಧಿಯ ಭೂಮಿ ಪೂಜಾ ಕಾರ್ಯಕ್ರಮವು ಡಿ.31 ರಂದು ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಅನಾದಿ ಕಾಲದಿಂದ ಸೂತ್ರಬೆಟ್ಟು ಸಾಲ್ಮರ ಆಶ್ರಯ ಕಾಲೋನಿಯ ಅಶ್ವತ್ಥಮರದ ಬಳಿಯ ಕಟ್ಟೆಯಲ್ಲಿರುವ ಶ್ರೀ ವಾಸುಕಿ ನಾಗರಾಜ ದೇವರನ್ನು ವಠಾರದ ಜನರು ಆರಾಧಿಸಿಕೊಂಡು ಬರುತ್ತಿದ್ದು, ನಾಗರಕಟ್ಟೆಯು ಶಿಥಿಲಗೊಂಡ ಹಿನ್ನೆಲೆ ಪ್ರಶ್ನಾ ಚಿಂತನೆ ನಡೆಸಲಾಗಿತ್ತು.
ಪ್ರಶ್ನಾ ಚಿಂತನೆಯಲ್ಲಿ ನಾಗನ ಕಟ್ಟೆಯನ್ನು ಕೂಡಲೇ ಪುನರ್ ನಿರ್ಮಾಣಗೊಳಿಸಲು ಆಜ್ಞೆಯಾಗಿದ್ದು, ಈ ನಿಟ್ಟಿನಲ್ಲಿ ಕೆಲ ದಿನಗಳ ಹಿಂದೇ ಅನುಜ್ಞಾ ಕಲಶ ನೆರವೇರಿಸಿದ್ದು, ಡಿ.31 ರಂದು ನೂತನವಾಗಿ ನಿರ್ಮಾಣವಾಗಲಿರುವ ಶ್ರೀ ವಾಸುಕಿ ನಾಗರಾಜ ದೇವರ ಕಟ್ಟೆಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ಸದಸ್ಯರಾದ ಪಿಜಿ ಜಗನ್ನಿವಾಸ್ ರಾವ್, ಭಾಮಿ ಅಶೋಕ್ ಶೆಣೈ, ಸ್ಥಳೀಯ ನಗರ ಸಭಾ ಸದಸ್ಯ ಪ್ರೇಮ್ ಕುಮಾರ್, ವಾಸುಕೀ ನಾಗರಾಜ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.