ಸುಳ್ಯ: ತೋಟದ ಕೆಲಸಕ್ಕೆಂದು ತೆರಳಿದ ವ್ಯಕ್ತಿಯೋರ್ವರು ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಘಟನೆ ಸುಳ್ಯದ ಮದೆನಾಡು ಎಂಬಲ್ಲಿ ನಡೆದಿದೆ.
ಮೃತರನ್ನು ಸುಳ್ಯ ಪೆರಾಜೆಯ ಶಿವಪ್ರಸಾದ್ ಎನ್ನಲಾಗಿದೆ.
ಮದೆ ಗ್ರಾಮದ ಬೆಟ್ಟತ್ತೂರು ಭಾಗದಲ್ಲಿ ತೋಟದ ಕೆಲಸಕ್ಕೆ ತೆರಳಿದ ವೇಳೆ ಶಿವಪ್ರಸಾದ್ ನನ್ನು ಕಾಡಾನೆ ತುಳಿದು ಸಾಯಿಸಿದೆ ಎನ್ನಲಾಗಿದೆ.
ಸ್ಥಳಕ್ಕೆ ಪೊಲೀಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.