ಪಂಜಾಬ್ನಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭದ್ರತಾ ಲೋಪವಾಗಿದ್ದು, ಇಡೀ ದೇಶವನ್ನೇ ದಿಗ್ಭ್ರಮೆಗೆ ದೂಡಿದೆ. ಈ ಬಗ್ಗೆ ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾ.ಅಮರಿಂದರ್ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಹಲವಾರು ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಪ್ರಧಾನಿ ಮೋದಿ ಭಟಿಂಡಾ ಏರ್ಪೋರ್ಟ್ಗೆ ಮರಳುತ್ತಿದ್ದಂತೆಯೇ ಅಲ್ಲಿನ ಸಿಬ್ಬಂದಿ ಉದ್ದೇಶಿಸಿ ಮಾತನಾಡುತ್ತಾ, “ನಾನು ಭಟಿಂಡಾ ಏರ್ಪೋರ್ಟ್ಗೆ ಬದುಕಿ ಬಂದಿದ್ದಕ್ಕೆ ನಿಮ್ಮ ಸಿಎಂಗೆ ಥ್ಯಾಂಕ್ಸ್ ಹೇಳಿ” ಎಂದಿರೋದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿಗಳ ಭದ್ರತೆ ವಿಷಯದಲ್ಲಿ ಲೋಪವಾಗಿರೋದನ್ನ ಒಪ್ಪಿಕೊಂಡಿರುವ ಪಂಜಾಬ್ ಸರ್ಕಾರ, ಇದ್ರಲ್ಲಿ ನಮ್ಮ ತಪ್ಪಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದೆ.
ಪಂಜಾಬ್ನಲ್ಲಿ ಬಿಜೆಪಿಯ ಚುನಾವಣೆಯ ಪ್ರಚಾರವನ್ನು ಲಾಂಚ್ ಮಾಡಲು ಮೋದಿ ಅವರ ಫಿರೋಜ್ಪುರ್ ನಲ್ಲಿ ನಡೆಯ ಬೇಕಿದ್ದ ರ‍್ಯಾಲಿ ಭಾಗಿಯಾಗಿ ಮಾತನಾಡಬೇಕಿತ್ತು. ಇಲ್ಲಿ ಇಂದು ಸುಮಾರು 42,750 ಕೋಟಿ ರೂಪಾಯಿಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಬೇಕಿತ್ತು. ಅಲ್ಲದೇ ಪಂಜಾಬ್ ಭೇಟಿ ಸಂದರ್ಭದಲ್ಲಿ ದೆಹಲಿ ಅಮೃತಸರ ಎಕ್ಸ್ಪ್ರೆಸ್ ಹೈವೇ ನಿರ್ಮಾಣದ ಭೂಮಿಪೂಜೆಯನ್ನು ನಿರ್ವಹಿಸಬೇಕಿತ್ತು.ಆದರೆ ಮಾರ್ಗ ನಡುವೆ ಎದುರಾದ ಭದ್ರತಾ ಲೋಪದ ಕಾರಣ ಪಂಜಾಬ್ ಭೇಟಿಯನ್ನು ರದ್ದು ಮಾಡಿದ್ದಾರೆ.
ಫಿರೋಜ್ಪುರ್ ಆಗಮಿಸುವ ಮಾರ್ಗ ನಡುವೆ ಮೋದಿ ಅವರ ಬೆಂಗಾವಲು ವಾಹನ 15-20 ನಿಮಿಷಗಳ ಕಾಲ ನಿಂತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.