ಮಂಜೇಶ್ವರ: ವಿಟ್ಲ ಸಮೀಪದ ಸಾಲೆತ್ತೂರಿನಲ್ಲಿರುವ ಮದುಮಗಳ ಮನೆಗೆ ಉಪ್ಪಳದ ಸಮೀಪ ಬೇಕೂರು ನಿವಾಸಿಯಾಗಿರುವ ಮುಸ್ಲಿಂ ( ಮತಾಂಧ) ಯುವಕನೋರ್ವ ತನ್ನ ವಿವಾಹ ಸಂಧರ್ಭದಲ್ಲಿ ಹಿಂದೂಗಳ ಆರಾಧ್ಯ ದೆೃವ ಕೊರಗಜ್ಜನ ವೇಷ ಧರಿಸಿ ಹೋಗಿ ದೈವ ನಿಂದನೆ ಮಾಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ನಡುವೆ ಅಲ್ಲಲ್ಲಿ ಪ್ರತಿಭಟನೆ, ದೈವ ಭಕ್ತರ ಸಾಮೂಹಿಕ ಪ್ರಾರ್ಥನೆ ನಡೆಯುವ ಬಗ್ಗೆ ವರದಿಯಾಗುತ್ತಿದ್ದು. ಇಲ್ಲೊಂದೆಡೆ ಕೊರಗಜ್ಜ ದೈವ ಕಟ್ಟಿದ ಕೋಲದಲ್ಲಿ ಅಭಯದ ನುಡಿಯಾಡಿ ಭಕ್ತರನ್ನು ಅನುಗ್ರಹಿಸಿದೆ.
ಮಂಗಳೂರಿನ ಮೇಲಿನಮೊಗರು ಅತ್ತಾವರ ಪರಿಸರದ ಕೊರಗಜ್ಜನ ಭಕ್ತರೆಲ್ಲಾ ಸೇರಿ ಇಂದು (ಶುಕ್ರವಾರ) ಅತ್ತಾವರದಲ್ಲಿರುವ ಸ್ವಾಮಿ ಕೊರಗಜ್ಜನ ಸನ್ನಿಧಿಯಲ್ಲಿ ನಡೆದಂತಹ ಹರಕೆಯ ಸೇವೆಯ ವೇಳೆಯಲ್ಲಿ ಕೊರಗಜ್ಜ ದೈವದಲ್ಲಿ ತಪ್ಪಿತಸ್ಥ ಅನ್ಯಧರ್ಮಿಯ ಯುವಕರು ತಮ್ಮ ತಪ್ಪಿನ ಅರಿವಾಗಿ ಕೊರಗಜ್ಜನ ಸನ್ನಿಧಿಗೆ ಬಂದು ಕ್ಷಮೆ ಕೇಳುವಂತೆ ಮಾಡಬೇಕು, ಇಲ್ಲವಾದಲ್ಲಿ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ದೈವದ ಮುಂಭಾಗ ಅರಿಕೆ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ ‘ಹುಚ್ಚಾಟ ಆಡಿದಾತನ್ನು ತಿಂಗಳೊಂದರೊಳಗೆ ಹುಚ್ಚು ಹಿಡಿಸಿ ಬೀದಿಯಲ್ಲಿ ಕುಣಿಸುವೆ” ಹೀಗೆಕೊರಗಜ್ಜ ದೈವ ಆಡಿದ ಅನುಗ್ರಹ ನುಡಿ ಇದೀಗ ಕರಾವಳಿಯ ಅಸಂಖ್ಯಾತ ಅಜ್ಜನ ಭಕ್ತರಿಗೆ ಭಕ್ತಿ ಭಾವುಕತೆ ಸೃಷ್ಟಿಸಿದೆ..