ಸುಳ್ಯ: ಆಟೋ ರಿಕ್ಷಾ ಮರಕ್ಕೆ ಗುದ್ದಿ ಆಟೋ ರಿಕ್ಷಾದಲ್ಲಿದ್ದ ಒಂದು ತಿಂಗಳ ಮಗು ಮೃತಪಟ್ಟ ಘಟನೆ ಬೇಂಗಮಲೆಯಲ್ಲಿ ನಡೆದಿದೆ.
ಮಗುವಿಗೆ ಅಸೌಖ್ಯವಿದ್ದ ಕಾರಣ ರಾತ್ರಿ ವೇಳೆ ಮಗುವನ್ನು ಆಟೋ ರಿಕ್ಷಾದಲ್ಲಿ ಸುಳ್ಯದ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಿಕ್ಷಾ ಮರಕ್ಕೆ ಗುದ್ದಿದ್ದು, ಅಪಘಾತದಿಂದಾಗಿ ಒಂದು ತಿಂಗಳ ಹಸುಗೂಸು ಸಾವನ್ನಪ್ಪಿದೆ ಎಂದು ತಿಳಿದು ಬಂದಿದೆ.