ವಿಟ್ಲ: ಕೊಳ್ನಾಡು – ಸಾಲೆತ್ತೂರು ಪ್ರದೇಶದಲ್ಲಿ ನಡೆದ ಕೊರಗಜ್ಜ ದೈವದ ಅವಹೇಳನದ ಘಟನೆಯ ಬಗ್ಗೆ ಕುಂಡಡ್ಕ ಶೆಡ್ಡು ಬಾಬು ಆಳ್ವ ರವರ ಮನೆಯಲ್ಲಿ ಇರುವ ಕೊರಗಜ್ಜನ ಕಟ್ಟೆಯಲ್ಲಿ ವಿಶ್ವ ಹಿಂದೂ ಪರಿಷತ್ ಭಜರಂಗದಳ ಕುಂಡಡ್ಕ ಶಾಖೆ ವತಿಯಿಂದ ಗ್ರಾಮದ ಪ್ರಮುಖರು, ಸಂಘಟನೆಯ ಪ್ರಮುಖರು, ಪಕ್ಷದ ಪ್ರಮುಖರು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ವಿಟ್ಲ ಪ್ರಖಂಡ ಸಂಚಾಲಕರಾದ ಚಂದ್ರಹಾಸ ಕನ್ಯಾನ ಹಾಗೂ ಕುಂಡಡ್ಕ ಶಾಖೆಯ ಸಂಚಾಲಕರಾದ ಕಿಶನ್ ಕುಂಡಡ್ಕ, ಸಹ ಸಂಚಾಲಕರಾದ ಹೇಮಂತ್ ಮರುವಾಳ, ಗೋ ರಕ್ಷಕ್ ಪ್ರಮುಖ್ ಹೇಮಂತ್ ಪಿಲಿಪ್ಪೆ, ಬಿಜೆಪಿ ಮುಖಂಡರಾದ ದಯಾನಂದ್ ಶೆಟ್ಟಿ ಉಜಿರೆಮರ್, ಕುಳ ಪಂಚಾಯತ್ ಸದಸ್ಯರಾದ ಪ್ರಶಾಂತ್ ಶೆಟ್ಟಿ ಬರೆ,ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಕಾಶ್ ನಾಯಕ್ ನಾಟೆಕಲ್ಲು, ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರಾದ ಗೋವಿಂದ ರಾಜ್ ಪೆರ್ವಾಜೆ, ವಿಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಉಮೇಶ್ ಅರ್ಕಲ್ ತೋಟ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.