ಸಂಪ್ಯ: ವಿಟ್ಲ ಕೊಳ್ನಾಡಿನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ತುಳುನಾಡಿನ ಕಾರಣಿಕ ದೈವ ಕೊರಗಜ್ಜನ ರೀತಿ ವೇಷ ಧರಿಸಿ ಕೊರಗಜ್ಜನ ಭಕ್ತಾದಿಗಳ ನಂಬಿಕೆಗೆ ಧಕ್ಕೆ ಉಂಟು ಮಾಡಿದ ಘಟನೆಗೆ ಸಂಬಂದಿಸಿ, ಸಂಪ್ಯ ಮಹಾವಿಷ್ಣು ಮೂರ್ತಿ ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿ ಹಾಗೂ ಉತ್ಸವ ಸಮಿತಿ ವತಿಯಿಂದ ಸಂಪ್ಯ ಮಹಾವಿಷ್ಣು ಮೂರ್ತಿ ದೇವಸ್ಥಾನ ದಲ್ಲಿ ದೈವವನ್ನು ಅವಮಾನಿಸಿದವರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥನೆ ಸಲ್ಲಿಸಲಾಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾದ ಡಾ.ಸುರೇಶ್ ಪುತ್ತೂರಾಯ, ಉತ್ಸವ ಸಮಿತಿ ಗೌರಾವಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಅಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ, ಉಪಾಧ್ಯಕ್ಷ ಭೀಮಯ್ಯ ಭಟ್, ಕಾರ್ಯದರ್ಶಿ ಉದಯ ಕುಮಾರ್ ರೈ, ಜತೆ ಕಾರ್ಯದರ್ಶಿ ಹರಿಣಿ ಪುತ್ತೂರಾಯ,ರಮೇಶ ರೈ ಮೊಟ್ಟೆತ್ತಡ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಲಕ್ಷಣ್ ಬೈಲಾಡಿ, ವಿನ್ಯಾಸ್ ಗೌಡ, ಜಗದೀಶ್ ಸಂಪ್ಯ ಮೂಲೆ, ಶಶಿಕಲಾ ರೈ, ರವಿನಾಥ ಗೌಡ ಬೈಲಾಡಿ, ರವಿ ಗೌಡ ಬೈಲಾಡಿ, ಉಮೇಶ ಉದಯಗಿರಿ,ಕುಂಞಣ್ಣ ಗೌಡ ಸಂಪ್ಯ ಮೂಲೆ, ಸುರೇಶ ಪೂಜಾರಿ ಸಂಪ್ಯ, ತೇಜಸ್ ಗೌಡ ,ಉಮೇಶ ಸಂಪ್ಯ, ಮಂಜಪ್ಪ ಗೌಡ ಬೈಲಾಡಿ ಸಹಿತ ಸಮಿತಿ ಸದಸ್ಯರು ಉಪಸ್ಥಿತರಿದ್ದರು.