ವಿಟ್ಲ: ಹಿಂದೂಗಳ ಆರಾಧ್ಯಮೂರ್ತಿ ಕೊರಗಜ್ಜನನ್ನು ಸಾಲೆತ್ತೂರಿನ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಅಪಚಾರ ಮಾಡಿರುವುದನ್ನು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ದೈವ ದೇವರನ್ನು ನಿಂದನೆ ಮಾಡಿ ಪೋಸ್ಟ್ ಹಾಕುತ್ತಿರುವವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹಿಂದೂ ಜಾಗರಣ ವೇದಿಕೆ ತ್ಯಾಗರಾಜನಗರ ವತಿಯಿಂದ ಸ್ವಾಮಿನಗರ ಕೊರಗಜ್ಜನ ಸಾನಿಧ್ಯದಲ್ಲಿ ಪ್ರಾರ್ಥನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.