ಪುತ್ತೂರು: ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ದರ್ಬೆ, ಪುತ್ತೂರು ಟೌನ್ ಓಲ್ಡ್ ಕೆಮ್ಮಾಯಿ ಮತ್ತು ವಾಟರ್ ಸಪ್ಲೈ ಫೀಡರ್‌ನಲ್ಲಿ ಮೇ12 ರಂದು ಪೂರ್ವಾಹ್ನ 10ರಿಂದ ಅಪರಾಹ್ನ 05:30 ಗಂಟೆಯವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದುದರಿಂದ. 110/33/11ಕೆವಿ ಪುತ್ತೂರು ವಿದ್ಯುತ್ ಉಪಕೇಂದ್ರದಿಂದ
ಹೊರಡುವ ಈ ಮೇಲೆ ತಿಳಿಸಿದ ಫೀಡರ್‌ನಿಂದ ವಿದ್ಯುತ್ ಸರಬರಾಜಾಗುವ ಕೆಎಸ್‌ಆರ್ ಟಿಸಿ, ಟ್ಯಾಕ್ಸಿ ಸ್ಟಾಂಡ್, ದೇವಣ್ಣ ಕಿಣಿ ಬಿಲ್ಡಿಂಗ್, ರೂಪಾ ಕಾಂಪ್ಲೆಕ್ಸ್ ಅಕ್ಷಯ ಮೋಟಾರ್, ಸಿಟಿ ಸೆಂಟರ್, ಕಲ್ಲಾರೆ, ದರ್ಬೆ ಸರ್ಕಲ್, ಅಶ್ವಿನಿ ಹೋಟೆಲ್, ಬೀರಮಲೆ, ಮಕ್ಕಳ ಮಂಟಪ, ಹನುಮಾನ್ ಮಿಲ್, ಐಬಿ, ಸಿಟಿಒ ರೋಡ್, ಎ.ಪಿ.ಎಂ.ಸಿ. ರೋಡ್, ಸಾಮೆತ್ತಡ್ಕ, ಎಂ.ಟಿ. ರೋಡ್, ಚಿಕ್ಕಪುತ್ತೂರು, ಮಡಿವಾಳಕಟ್ಟೆ, ಕೋರ್ಟ್ ರೋಡ್, ಮಿನಿ ವಿಧಾನ ಸೌಧ, ಚೇತನಾ ಹಾಸ್ಪಿಟಲ್, ಪರ್ಲಡ್ಕ, ಬೈಪಾಸ್, ಗೋಳಿಕಟ್ಟೆ, ಕುಂಜೂರು ದೇವಸ್ಥಾನ, ತೆಂಕಿಲ, ಬಪ್ಪಳಿಗೆ, ಬಾಲವನ, ಉರ್ಲಾಂಡಿ, ಸರಕಾರಿ ಆಸ್ಪತ್ರೆ, ಕರ್ಮಲ, ಬೊಳ್ವಾರು, ಬೀರ್ನಹಿತ್ಲು, ಚಿಕ್ಕಮುಡ್ನೂರು , ಕೆಮ್ಮಾಯಿ ಮಹಾವಿಷ್ಣು ದೇವಸ್ಥಾನ, ಬಡಾವು , ಸಾಲ್ಮರ ಮತ್ತು ನೆಕ್ಕಿಲಾಡಿ ನೀರು ಸರಬರಾಜು ಘಟಕ ಪರಿಸರದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಪುತ್ತೂರು ಬೊಳುವಾರು ಎಂಬಲ್ಲಿ ರಸ್ತೆ ಅಗಲೀಕರಣ ಕಾಮಗಾರಿ ನಿಮಿತ್ತ ವಿದ್ಯುತ್ ಮಾರ್ಗದ ಸ್ಥಳಾಂತರ ಕಾಮಗಾರಿ ಇರುವುದರಿಂದ, ಮೇ 12 ರಂದು ಪೂರ್ವಾಹ್ನ 10.00ರಿಂದ ಸಾಯಂಕಾಲ 05:30 ಗಂಟೆಯವರೆಗೆ ಪುತ್ತೂರು- ಕಡಬ-ಸುಬ್ರಹ್ಮಣ್ಯ ಹಾಗೂ 33 ಕೆ.ವಿಪುತ್ತೂರು-ಸವಣೂರು -ನೆಲ್ಯಾಡಿವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಅದ್ದರಿಂದ 33/11ಕೆವಿ ಕಡಬ ವಿದ್ಯುತ್ ಉಪಕೇಂದ್ರ, 33/11ಕೆವಿ ನೆಲ್ಯಾಡಿ ವಿದ್ಯುತ್ ಉಪಕೇಂದ್ರ ಹಾಗೂ 33/11ಕೆವಿ ಸವಣೂರು ವಿದ್ಯುತ್ ಉಪಕೇಂದ್ರ ದಿಂದ ಹೊರಡುವ ಎಲ್ಲಾ 11ಕೆವಿ ಫೀಡರ್‌ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು, ಹಾಗೂ 33/11ಕೆವಿ ಬಿಂದು ವಿದ್ಯುತ್ ಉಪಕೇಂದ್ರ ರವರು ಗಮನಿಸಿ ಸಹಕರಿಸಬೇಕಾಗಿ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

























