ವಿಟ್ಲ: ಇಲ್ಲಿನ ಅಂಚೆಕಚೇರಿ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನವೊಂದರಲ್ಲಿ ಇರಿಸಲಾಗಿದ್ದ ಹೆಲೈಟ್ ಒಂದನ್ನು ದ್ವಿಚಕ್ರವಾಹನದಲ್ಲಿ ಬಂದ ವ್ಯಕ್ತಿಯೋರ್ವ ಕಳ್ಳತನ ನಡೆಸಿದ ಘಟನೆ ನಡೆದಿದೆ. ಕಳ್ಳನ ಈ ಕೈಚಳಕ ಪಕ್ಕದಲ್ಲಿರುವ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಟ್ಲ ಪಡ್ನೂರು ಗ್ರಾಮದ ಸರವು ನಿವಾಸಿ, ನ್ಯಾಯವಾದಿ, ಜಲಶೋಧಕ ಶ್ರೀಧರ್ ಭಟ್ ಕುಕ್ಕೆಮನೆ ಅವರ ಹೆಲೈಟ್‌ನ್ನು ಕಳವು ಮಾಡಲಾಗಿದೆ.
ಅವರು ಆ.8ರಂದು ಬೆಳಗ್ಗೆ ಅಂಚೆ ಕಚೇರಿ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ದೇವಸ್ಥಾನಕ್ಕೆ ತೆರಳಿದ್ದರು. ಹಿಂದಿರುಗಿ ಬಂದು ನೋಡಿದಾಗ ಸ್ಕೂಟರ್ ಮೇಲಿದ್ದ ಹೊಸ ಹೆಲ್ಮೆಟ್ ನಾಪತ್ತೆಯಾಗಿದ್ದು, ಅದರ ಜಾಗದಲ್ಲಿ ಯಾರೋ ಹಳೆಯ ಹೆಲೈಟ್ ಇಟ್ಟಿರುವುದು ಕಂಡುಬಂದಿದೆ. ಅನುಮಾನಗೊಂಡು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.
ಕಪ್ಪು ಬಣ್ಣದ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಫೋನ್‌ನಲ್ಲಿ ಮಾತನಾಡುತ್ತಾ ಬಂದು, ಏನೂ ತಿಳಿಯದವನಂತೆ ನಟಿಸಿ ತನ್ನ ಹಳೆಯ ಹೆಲೈಟ್‌ನ್ನು ಶ್ರೀಧರ್ ಭಟ್ ಅವರ ಸ್ಕೂಟರ್ ಮೇಲೆ ಇಟ್ಟು ಅಲ್ಲಿದ್ದ ಹೊಸ ಹೆಲ್ಲೆಟ್‌ನ್ನು ತನ್ನ ತಲೆಗೆ ಇಟ್ಟುಕೊಂಡು ಹೋಗಿರುವುದು ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ಕುರಿತು ಶ್ರೀಧರ್ ಭಟ್ ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿದ್ದಾರೆ.


























