ಅಲಂಕಾರು: ಬೈಕ್ ಗೆ ವೇಗವಾಗಿ ಬಂದ ಥಾರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ಅಲಂಕಾರು ಬಳಿ ನಡೆದಿದೆ.
ಮೃತರನ್ನು ಅಲಂಕಾರು ನಿವಾಸಿ ಲೋಕೇಶ್ ಗೌಡ ಎಂದು ಗುರುತಿಸಲಾಗಿದೆ.
ಬೈಕ್ ಗೆ ಡಿಕ್ಕಿ ಹೊಡೆದ ಥಾರ್ ಚಾಲಕ ವಾಹನ ನಿಲ್ಲಿಸದೇ ಹೋಗಿದ್ದು ಬಳಿಕ ಮನೆಯೊಂದರ ಬಳಿ ವಾಹನ ಪತ್ತೆಯಾಗಿದೆ. ಥಾರ್ ವಾಹನ ಚಾಲಕ ಸದ್ಯ ಪರಾರಿಯಾಗಿದ್ದು ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.



























