ಆದಿದೈವ ಧೂಮಾವತಿ ಕ್ಷೇತ್ರ,ಸಾಯನ ಬೈದ್ಯರ ಗುರುಪೀಠ, ದೇಯಿಬೈದ್ಯೆತಿ ಕೋಟಿಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಪ್ರತಿಷ್ಠಾ ವರ್ಧಂತಿ ಮತ್ತು ವಾರ್ಷಿಕ ಜಾತ್ರಾ ಮಹೋತ್ಸವವು ಫೆ.26 ರಿಂದ ಮಾರ್ಚ್ 2 ರವರೆಗೆ ನಡೆಯಲಿದೆ.ಫೆ.26 ರಂದು ದೇವತಾ ಪ್ರಾರ್ಥನೆ, ಪುಣ್ಯಾಹ, ಸ್ಥಳಶುದ್ಧಿ, ಶ್ರೀ ಗಣಪತಿ ಹೋಮ, ಮೀನ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ, ಶ್ರೀ ನಾಗ ಸಾನಿಧ್ಯದಲ್ಲಿ ಕ್ಷೀರ ಅಭಿಷೇಕ, ತಂಬಿಲ, ಧೂಮಾವತಿ ಮತ್ತು ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ನವಕ ಕಲಶಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ,ಮಹಾಪೂಜೆ, ಧೂಮಾವತಿ ಸಾನಿಧ್ಯದಲ್ಲಿ ಬಲಿ ಉತ್ಸವ ನಡೆಯಲಿದೆ.
ಫೆ 27 ರಂದು ಧೂಮಾವತಿ ಸಾನಿಧ್ಯದಲ್ಲಿ ಶುದ್ಧ ಕಲಶಹೋಮ, ಪಂಚಪರ್ವ, ಧೂಮಾವತಿ ನೇಮೋತ್ಸವ, ಕುಪ್ಪೆ ಪಂಜುರ್ಲಿ ಸಾನಿಧ್ಯದಲ್ಲಿ ಶುದ್ಧ ಕಲಶಹೋಮ,ಪಂಚಪರ್ವ, ಭಂಡಾರ ಇಳಿಯುವುದು,ಧೂಮಾವತಿ ಬಲಿ ಉತ್ಸವ,ಕುಪ್ಪೆ ಪಂಜುರ್ಲಿ ನೇಮೋತ್ಸವ ನಡೆಯಲಿದೆ.
ಫೆ.28 ರಂದು ನಾಗ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಪಂಚಾಮೃತ, ಕಲಶಾಭಿಷೇಕ, ಆಸ್ಲೇಷಬಲಿ, ತಂಬಿಲ, ಕಲ್ಲಾಲ್ಧಾಯ ಸಾನಿಧ್ಯದಲ್ಲಿ ನವಕ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಪಂಚಪರ್ವ, ಭಂಡಾರ ಇಳಿಯುವುದು, ಧೂಮಾವತಿ ಬಲಿ ಉಇತ್ಸವ, ಕಲ್ಲಾಲ್ಧಾಯ ನೇಮೋತ್ಸವ, ಕೊರತಿ ದೈವಕ್ಕೆ ನರ್ತನ ಸೇವೆ ನಡೆಯಲಿದೆ.
ಮಾರ್ಚ್ 01 ರಂದು ಬೆರ್ಮೆರ್ ಗುಂಡ, ಕೋಟಿ ಚೆನ್ನಯ ಮೂಲಸ್ಥನ ಗರಡಿ,ದೇಯಿ ಬೈದ್ಯೆತಿ,ಸತ್ಯಧರ್ಮ ಚಾವಡಿಯಲ್ಲಿ ನವಕಲಶ ಪ್ರಧಾನ ಹೋಮ, ಕಲಶಾಭಿಷೇಕ, ಮಹಾಪೂಜೆ, ಮೂಲಸ್ಥಾನ ಗರಡಿಯಲ್ಲಿ ಕಲಶಹೋಮ, ಧೂಮಾವತಿ ಬಲಿ ಉತ್ಸವ ನಡೆಯಲಿದೆ.
ರಾತ್ರಿ 7 ಗಂಟೆಯಿoದ ವಿದ್ವಾನ್ ಶ್ರೀ ವೆಂಕಟಕೃಷ್ಣ ಭಟ್ ಇವರ ಶಿಷ್ಯೆ ಕುಮಾರಿ ಶ್ರೀರಕ್ಷಾ ಎಸ್ ಎಚ್ ಪೂಜಾರಿ ಹಾಡಿರುವ ಸುಧಾಕರ ಸುವರ್ಣ ತಿಂಗಳಾಡಿಯವರ ಸಾಹಿತ್ಯದಲ್ಲಿ ಮೂಡಿಬಂದ ಕನ್ನಡ ಭಕ್ತಿಗಾನ ಸುಧೆ ಗೆಜ್ಜೆಗಿರಿ ನಂದಾಮೃತ ಲೋಕಾರ್ಪಣೆಗೊಳ್ಳಲಿದೆ. ಬಳಿಕ ಮೂಲಸ್ಥಾನ ಗರಡಿಯಲ್ಲಿ ಕೋಟಿ ಚೆನ್ನಯರ ದರ್ಸನ ಸೇವೆ, ಬೆರ್ಮೆರ್ ಗುಂಡದಲ್ಲಿ ಫಲ ಸಮರ್ಪಣೆ, ವೀರಪಥದಲ್ಲಿ ಕೋಟಿ ಚೆನ್ನಯರ ಆಗಮನ, ಸತ್ಯಧರ್ಮ ಚಾವಡಿಯಲ್ಲಿ ಮಾತೆ ದೇಯಿ ಬೈದ್ಯೆತಿ ದರ್ಶನ,, ಮಾತೆ ಮಕ್ಕಳ ಪುನೀತ ಸಮಾಗಮ, ಕೋಟಿಚೆನ್ನಯ ಮೂಲಸ್ಥಾನ ಗರಡಿ ನೇಮೋತ್ಸವ ಜರುಗಲಿದೆ.
ಮಾರ್ಚ್ 02 ರಂದು ಸತ್ಯಧರ್ಮ ಚಾವಡಿಯಲ್ಲಿ ಕಲಶಹೋಮ, ನೈವೇದ್ಯ ಸೇವೆ, ದೇಯಿಬೈದ್ಯೆತಿ ಸಮಾಧಿಯಲ್ಲಿ ದೀಪಾರಾಧನೆ, ಮಹಾಪುಜೆ, ದೇಯಿಬೈದ್ಯೆತಿ ಮಹಾನೇಮ ವೈಭವ, ಧ್ವಜವರೋಹಣ ಜರುಗಲಿದ್ದು ಪ್ರತೀ ದಿನವೂ ಅನ್ನಸಂತರ್ಪಣೆಯೂ ನಡೆಯಲಿದೆ.