ವಿಟ್ಲ: ಪಟ್ಟಣ ಪಂಚಾಯತ್ ನ ಅರ್ಹ ಫಲಾನುಭವಿಗಳಿಗೆ ಚೆಕ್ ಹಾಗೂ ಪ್ರಾಕೃತಿಕ ವಿಕೋಪದ ಪರಿಹಾರ ಧನವನ್ನು ಪುತ್ತೂರು ಶಾಸಕರಾದ ಸಂಜೀವ ಮಠಂದೂರು ರವರು ಜ.13 ರಂದು ವಿಟ್ಲದ ನಿರೀಕ್ಷಣಾ ಮಂದಿರದಲ್ಲಿ ವಿತರಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ವಿಟ್ಲ ಪಟ್ಟಣ ಪಂಚಾಯತ್ ನ ಮುಖ್ಯಾಧಿಕಾರಿ ಮಾಲಿನಿ, ಕಂದಾಯ ನಿರೀಕ್ಷಕ ಮಂಜುನಾಥ್, ಗ್ರಾಮ ಕರಣಿಕ ಪ್ರಕಾಶ್, ನೂತನ ಸದಸ್ಯರಾದ ಅಶೋಕ್ ಕುಮಾರ್ ಶೆಟ್ಟಿ, ಕೃಷ್ಣ ಎನ್, ಸಂಗೀತ ಪಾಣೆಮಜಲು, ಅರುಣ್ ವಿಟ್ಲ, ಕರುಣಾಕರ ನಾಯ್ತೊಟ್ಟು, ಹರೀಶ್ ಸಿಎಚ್, ಜಯಂತ್ ಸಿಎಚ್, ರಕ್ಷಿತಾ ಸನತ್, ಸುನೀತ ಉಕ್ಕುಡ, ವಿಜಯಲಕ್ಷ್ಮಿ, ಮಾಜಿ ಸದಸ್ಯರಾದ ಶ್ರೀಕೃಷ್ಣ ವಿಟ್ಲ, ರಾಮದಾಸ್ ಶೆಣೈ, ಪ್ರಮುಖರಾದ ಕೃಷ್ಣಯ್ಯ ಅರಮನೆ, ವೀರಪ್ಪ ಗೌಡ ಉಪಸ್ಥಿತರಿದ್ದರು.




























