ಪುತ್ತೂರು: ಜಾತಿ ನಿಂದನೆಗೈದಿದ್ದಾನೆ ಎಂದು ಆರೋಪಿಸಿ ಮುಕ್ವೆಯ ಮುನಾಫ್ ಎಂಬಾತನ ವಿರುದ್ಧ ಸವಣೂರಿನ ಯುವತಿಯೋರ್ವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.
ಮುಕ್ವೆ ನಿವಾಸಿ ಅಬ್ದುಲ್ಲಾ ಮುನಾಫ್ ವಿರುದ್ಧ ದೂರು ದಾಖಲಾಗಿದ್ದು, 23 ವರ್ಷದ ಪರಿಶಿಷ್ಟ ಜಾತಿಯ ಯುವತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ ಎಂದು ಆರೋಪಿಸಲಾಗಿದೆ.
ಮುಕ್ವೆಯ ಮುನಾಫ್ ಗೆ ಸವಣೂರಿನ ಹಿಂದೂ ಮಹಿಳೆಯೊಂದಿಗೆ ನಿಕಟ ಸಂಬಂಧವಿದೆ ಎಂಬ ಮಾತು ಕೇಳಿ ಬರುತ್ತಿದ್ದು, ಹೆಚ್ಚಾಗಿ ಆಕೆಯ ಮನೆಯಲ್ಲಿಯೇ ಉಳಿಯುತ್ತಿದ್ದ, ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.
ಈ ವಿಚಾರವಾಗಿ ಹಲವು ಭಾರೀ ಹಿಂದು ಸಂಘಟನೆಯವರು ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಜಾಗದ ವಿಚಾರಕ್ಕೆ ಸಂಬಂಧಿಸಿ ಎರಡು ತಂಡಗಳ ನಡುವೆ ವಿವಾದವು ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
ಮುನಾಫ್ ವಿರುದ್ಧ 420 ಕೇಸ್ ದಾಖಲು ಮಾಡಲೂ ಸಿದ್ಧತೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹಿಂದೂ ಹೆಣ್ಮಕ್ಕಳ ಜೊತೆ ವಾಹನದಲ್ಲಿ ಹಲವು ಬಾರಿ ತೆರಳುವಾಗ ಹಿಂದೂ ಸಂಘಟನೆಯವರು ಈತನಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಮುನಾಫ್ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿದೆ.