ನರೇಂದ್ರ ಮೋದಿ,ಅಮಿತ್ ಶಾ ತಾಯಿ ಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುವ ಮೂಲಕ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಪುತ್ತೂರು ಮೂಲದ ಶೈಲಜಾ ಅಮರನಾಥ್ ಹೊಸ ವಿವಾದ ಸೃಷ್ಟಿಸಿದ್ದಾರೆ. ಶೈಲಜಾ ರವರು ಮಾತನಾಡಿದ್ದಾರೆ ಎನ್ನುವಂತಹ ಆಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ..
ಕ್ಲಬ್ ಹೌಸ್ ನಲ್ಲಿ ಚರ್ಚೆಯ ವೇಳೆ ಮಾತನಾಡಿದ ಶೈಲಜಾ ಅವರು “ಬಿಜೆಪಿ ಬೆಂಬಲಿಗರು ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾರೆ, ನರೇಂದ್ರ ಮೋದಿ ಮತ್ತು ತಾಯಿ ಮತ್ತು ಅಮಿತ್ ಶಾ ತಾಯಿ ಕೂಡ…. ನಾರ್ತ್ ಇಂಡಿಯಾದ ಹೆಣ್ಣು ಮಕ್ಕಳೆಲ್ಲ ಅಂಥವರೇ, ಅವರ ಬದುಕು ಹೇಗಿತ್ತೆಂದರೆ ಕರುಳು ಮಾತ್ರವಲ್ಲ ಕಿಡ್ನಿಯೂ ಕಿತ್ತು ಬರುತ್ತದೆ” ಎಂದು ಹೇಳಿದ್ದಾರೆನ್ನಲಾಗಿದೆ.
ಈ ರೀತಿಯಾಗಿ ಅವಹೇಳನಕಾರಿ ಹೇಳಿಕೆ ನೀಡಿರುವ ಆಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದೆ.
ಈ ಬಗ್ಗೆ ಸ್ಪಷ್ಟಿಕರಣ ನೀಡಿದ ಶೈಲಜಾ ಅಮರನಾಥ್ ರವರು, “ಬಿಜೆಪಿ ಬೆಂಬಲಿಗರು ನನ್ನ ಜನಪರ ಧ್ವನಿ ಅಡಗಿಸಲು ಎಡಿಟಿಂಗ್ ಮಾಡಿ ಧ್ವನಿ ಆಡಿಯೋ ಅನ್ನು ಹರಿಬಿಟ್ಟಿದ್ದಾರೆ., ಸೋನಿಯಾ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರ ಬಗ್ಗೆ ಯಾರೋ ಕೀಳು ಭಾಷೆಯಲ್ಲಿ ನಿಂದಿಸಿದಾಗ ಉತ್ತರಿಸಿದ ಅರ್ಧ ಧ್ವನಿಯನ್ನು ಎಡಿಟಿಂಗ್ ಮಾಡಿ ಹಾಕಲಾಗಿದೆ” ಎಂದು ಆರೋಪಿಸಿದ್ದಾರೆ.