ಪುತ್ತೂರು: ಅಲಂಕಾರು ಶರವೂರು ನಿವಾಸಿ ನೇಮಣ್ಣ ಗೌಡ ಜ.18 ರಂದು ನಿಧನರಾದರು.
ನೇಮಣ್ಣ ಗೌಡ ರವರು ಶಾಂತಿಮೊಗರು ಕುದ್ಮಾರು ಬಳಿಯ ಕುಮಾರಧಾರ ನದಿಯ ಪಕ್ಕದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕರನ್ನು ಮತ್ತು ಸ್ಥಳೀಯರನ್ನು ಬ್ರಿಡ್ಜ್ ಇಲ್ಲದ ಸಂದರ್ಭದಲ್ಲಿ ದೋಣಿಯ ಮೂಲಕ ನದಿಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುತ್ತಿದ್ದು, ಸಾರ್ವಜನಿಕರ ವಲಯದಲ್ಲಿ ಚಿರಪರಿಚಿತರಾಗಿದ್ದರು.
ಮೃತರು ಪತ್ನಿ, ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.