ಸುಂದರವಾದ ಪಂಚೆ, ಗುಣಮಟ್ಟದ ಜತೆಗೆ ಶುಭ ಸಮಾರಂಭಗಳಿಗೆ ಉಡುಪುಗಳು ಬೇಕೆಂದಾಗ ಮೊದಲು ನೆನಪಾಗೋದು ರಾಮ್ ರಾಜ್ ಬ್ರಾಂಡ್.. ಅದರಲ್ಲೂ ಪುರುಷರ ಪಾಲಿಗೆ ಪ್ರಥಮ ಆಯ್ಕೆ ಇದೇ.. ಪುತ್ತೂರ ಜನ ತಮ್ಮ ಉಡುಪು ಖರೀದಿಗಾಗಿ ರಾಮ್ ರಾಜನ್ನು ಹುಡುಕ್ತಾ ಮಂಗಳೂರು ಅಥವಾ ಬೆಂಗಳೂರಿಗೋ ಧಾವಿಸಬೇಕಾಗಿತ್ತು.. ಆದರೆ ಇನ್ನು ಮುಂದೆ ಈ ಚಿಂತೆ ಇಲ್ಲ.. ವಿಧ ವಿಧ ವಿನ್ಯಾಸದ ಪಂಚೆಗಳು, ಅತ್ಯುತ್ತಮ ಗುಣಮಟ್ಟ , ಅತ್ಯುತ್ತಮ ಸೇವೆ, ಮಿತದರದಲ್ಲಿ ಶ್ವೇತ ಶುಭ್ರ ಬಣ್ಣದ ಕಾಟನ್ ಧೋತಿಗಳು ನೂತನ ಮಳಿಗೆಯಲ್ಲಿ ಲಭ್ಯ.
ಮದುವೆ, ಶುಭ ಸಮಾರಂಭಗಳಿಗೆ ಒಪ್ಪುವಂತಹ ನವ ನವೀನ ಕಾಟನ್ ದಿರಿಸುಗಳು, ಧೋತಿಗಳು, ರೇಷ್ಮೆ ಸಹಿತ ವಿವಿಧ ಮಾದರಿಯ ಪುರುಷರ ಅಂಗಿಗಳು ಸೇರಿದಂತೆ ಇಲ್ಲಿ ಮಹಿಳೆಯರಿಗಾಗಿ ಬಿಳಿ ಬಣ್ಣದ ಸೀರೆಯೂ ಸಾಂಪ್ರದಾಯಿಕತೆಯ ಕಂಪನ್ನು ಇಮ್ಮಡಿಗೊಳಿಸಲಿದೆ.
ಪುತ್ತೂರಿನ ಎಳ್ಮುಡಿ ಮುಖ್ಯರಸ್ತೆಯಲ್ಲಿರುವ ಪ್ರೊವಿಡೆನ್ಸ್ ಪ್ಲಾಝಾದಲ್ಲಿ ನಿರ್ಮಾಣಗೊಂಡಿರುವ ರಾಮ್ ರಾಜ್ ಕಾಟನ್ ಪಂಚೆ ಹಾಗೂ ಧೋತಿಗಳ ಮಳಿಗೆಯ ಶುಭಾರಂಭ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮಕ್ಕೆ ಶಾಸಕ ಸಂಜೀವ ಮಠಂದೂರು ಚಾಲನೆ ನೀಡಿ ನೂತನ ಮಳಿಗೆಯ ಆರಂಭಕ್ಕೆ ಮೆಚ್ಚುಗೆಯ ಮಾತುಗಳನ್ನಾಡಿದರು. ಆರ್ ಬಿ ಎಂ ರಾಮ್ ರಾಜ್ ಕರ್ನಾಟಕ ಪ್ರಮುಖರಾದ ರಾಜೇಶ್ ಜೀವನ್ ದೀಪ ಬೆಳಗಿಸಿ ಶುಭ ನುಡಿಗಳನ್ನಾಡಿದರು. ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಬಲ್ಲಮಜಲು ಉದ್ಯಮಿ ಶಿವರಾಮ ಆಳ್ವ, ಸಾಜಾ ರಾಧಾಕೃಷ್ಣ ಆಳ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಥೆಗೆ ಶುಭ ಹಾರೈಸಿದರು.
ಶಾಸಕರಿಂದ ಪ್ರಥಮ ಖರೀದಿ:
ನೂತನ ಮಳಿಗೆಯನ್ನು ಉದ್ಘಾಟಿಸಿದ ಶಾಸಕ ಸಂಜೀವ ಮಠಂದೂರುರವರು ತಾನು ರಾಮ್‌ರಾಜ್ ಉತ್ಪನ್ನಗಳ ಗ್ರಾಹಕನಾಗಿದ್ದೇನೆ ಎಂದು ತಿಳಿಸಿರುವುದಲ್ಲದೆ
ಮಳಿಗೆಯಿಂದ ಪ್ರಥಮ ಗ್ರಾಹಕನಾಗಿ ಶರ್ಟ್ ಪೀಸ್‌ನ್ನು ಖರೀದಿ ಮಾಡಿದರು.
ರಾಮ್‌ರಾಜ್ ಉತ್ಪನ್ನಗಳು:
ರಾಮ್‌ರಾಜ್ ಕಾಟನ್‌ನಲ್ಲಿ ಸಾಂಪ್ರದಾಯಿಕ ಪಂಚೆ, ಶಲ್ಯ,ಶರ್ಟು ಮತ್ತಿತರ ಬಟ್ಟೆಗಳ ಜತೆಯಲ್ಲಿ ಬಾರ್ಡರ್, ಸೊಗಾರ್ಡ್, ಪರ್‌ಫ್ರಮ್, ರಿಂಕಲ್ ರಹಿತ,
ಶುಭಮುಹೂರ್ತ, ಎಂಬ್ರಾಯಿಡರಿ, ಮೆಯಿಲ್ಮನ್ ಧೋತಿಗಳು ಹಾಗೂ ಡಿಸೈನರ್, ಸಿಲ್ಕ್, ಕೂಲ್ ಕಾಟನ್, ಅಲ್ಟಿಮೇಟ್, ಲಿನೆನ್, ಬಾರ್ಡರ್ ಮ್ಯಾಚಿಂಗ್ ಮುಂತಾದ ಶರ್ಟುಗಳ ಜೊತೆಗೆ ಮಕ್ಕಳ ಸಾಂಪ್ರದಾಯಿಕ ಬಟ್ಟೆಗಳು, ಮದುವೆ ಪಂಚೆ, ಪಂಚಕಮ್, ಶೂಟಿಂಗ್ ಆಂಡ್ ಶರ್ಟಿಂಗ್, ಫೇಸ್‌ಮಾಸ್ಕ್, ಕಾಟನ್ ಶರ್ಟ್, ಕೂಲ್ ಕಾಟನ್ ಶರ್ಟ್, ಕೇರಳ ಶೈಲಿಯ ಬಟ್ಟೆಗಳು, ಡಿಸೈನ್
ಶರ್ಟ್, ಫಾರ್ಮಲ್ ಶರ್ಟ್, ಸಿಲ್ಕ್ ಶರ್ಟ್, ಟಿಶರ್ಟ್, ಬನಿಯಾನ್, ಲೆಗ್ಗಿನ್ಸ್, ಶಾಕ್ಸ್, ಮಕ್ಕಳ, ಪುರುಷರ, ಮಹಿಳೆಯರ ಒಳಉಡುಪುಗಳು ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.