Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

    ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು..!!

    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಅಶೋಕ ಜನಮನ ಕಾರ್ಯಕ್ರಮದಲ್ಲಿ‌ ಜನಸಂದಣಿಯಿಂದ ಅಸ್ವಸ್ಥ : ಆಸ್ಪತ್ರೆಗೆ ಭೇಟಿ‌ ಮಾಜಿ ಶಾಸಕ ಸಂಜೀವ ಮಠoದೂರು..!!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

    ಬಲ್ನಾಡು – ಮಚ್ಚಿಮಲೆ ರಸ್ತೆ ಮೇಲೆ ಗುಡ್ಡ ಕುಸಿತ: ಸಂಚಾರಕ್ಕೆ ಅಡಚಣೆ..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಷ್ಟ್ರೀಯ

ಗೋಣಿ ಚೀಲದಲ್ಲಿತ್ತು ಬಾಂಗ್ಲಾ ಬೆಡಗಿಯ ಶವ..!! ನಟಿಯ ಬದುಕಿಗೆ ಕ್ಲೈಮ್ಯಾಕ್ಸ್​ ಬರೆದ ಪತಿರಾಯ..!!!

January 21, 2022
in ರಾಷ್ಟ್ರೀಯ, ಸಿನಿಮಾ
0
ಗೋಣಿ ಚೀಲದಲ್ಲಿತ್ತು ಬಾಂಗ್ಲಾ ಬೆಡಗಿಯ ಶವ..!! ನಟಿಯ ಬದುಕಿಗೆ ಕ್ಲೈಮ್ಯಾಕ್ಸ್​ ಬರೆದ ಪತಿರಾಯ..!!!
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಆಕೆ ಬಾಂಗ್ಲಾ ದೇಶದ ಜನಪ್ರಿಯ ನಟಿ. ಸರಿಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಬಾಂಗ್ಲಾದಾದ್ಯಂತ ಫುಲ್ ಫೇಮಸ್​ ಆಗಿದ್ಲು. ಹೀಗೆ ಸಿನಿ ಲೋಕದಲ್ಲಿ ಮಿಂಚುತ್ತಿರುವಾಗಲೇ ಇದ್ದಕ್ಕಿಂದ್ದಂತೆ ನಾಪತ್ತೆಯಾಗ್ತಾಳೆ. ಮೂರು ದಿನದ ಬಳಿಕ ಗೋಣಿ ಚೀಲದಲ್ಲಿ ಸೇತುವೆಯ ಕೆಳಗಡೆ ಪತ್ತೆಯಾಗಿದ್ದು, ನಟಿಯ ಕೊಳೆತ ಶವ. ಹಾಗಾದ್ರೆ ಬಾಂಗ್ಲಾ ಬೆಡಗಿಯ ಬದುಕಲ್ಲಿ ಆಗಿದ್ದೇನು..?

Advertisement
Advertisement
Advertisement

ಕೆಲವೊಂದು ಕ್ರೈಂ ಸ್ಟೋರಿಗಳೇ ಹಾಗೆ.. ಯಾರಿಂದಲೋ ಶುರುವಾಗಿ ಇನ್ಯಾರದ್ದೋ ಕೊರಳಿಗೆ ಉರುಳಾಗಿ ಬಿಡುತ್ತೆ. ಕೇಸ್ ದಾಖಲು ಮಾಡಿದವರೇ ಕಡೆಗೆ ಕಂಬಿ ಹಿಂದೇ ಸೇರ್ತಾರೆ. ಅಂತಹದ್ದೆ ಘಟನೆಯೊಂದು ಬಾಂಗ್ಲಾದಲ್ಲಿ ನಡೆದಿದೆ. ದುಂಡು ಮುಖ, ಎಂಥವರನ್ನು ಸೂಜಿಗಲ್ಲಿನಂತೆ ಸೆಳೆಯುವ ಅಧ್ಭುತ ನಟನೆ. ಹೀಗೆ ಬ್ಯೂಟಿ ಪ್ರಪಂಚದಲ್ಲಿ ಮೈ ಚಳಿ ಬಿಟ್ಟು ಕುಣಿಯುತ್ತಿರುವ ಈಕೆ ಬಾಂಗ್ಲಾ ದೇಶದ ಪ್ರಸಿದ್ಧ ನಟಿ. ಹೆಸರು ರೈಮಾ ಇಸ್ಲಾಂ ಶಿಮು.

Advertisement

1998ರಲ್ಲಿ ಬರ್ತಮನ್ ಚಿತ್ರದ ಮೂಲಕ ಸಿನಿಮಾ ಲೋಕಕ್ಕೆ ಎಂಟ್ರಿ ಕೊಟ್ಟ ರೈಮಾ ಈಗಾಗಲೇ 25ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಕೆಲವು ಧಾರಾವಾಹಿಗಳನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಬಾಂಗ್ಲಾದೇಶದ ಚಲನಚಿತ್ರ ಕಲಾವಿದರ ಸಂಘದ ಸದಸ್ಯೆ ಕೂಡ ಆಗಿರುವ ರೈಮಾ, ಬಾಂಗ್ಲಾದೇಶದ ಚಲನಚಿತ್ರೋದ್ಯಮದಲ್ಲಿ ತುಂಬಾ ಜನಪ್ರಿಯ ನಟಿಯಾಗಿದ್ಲು.

Advertisement
Advertisement

ಒಂದಲ್ಲ ಎರಡಲ್ಲ.. ಬರೋಬ್ಬರಿ 25 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ರೈಮಾ ಇಸ್ಲಾಂ ಶಿಮು ವಿಭಿನ್ನ ಪಾತ್ರಗಳ ಮೂಲಕ ಬಾಂಗ್ಲಾ ಸಿನಿ ಲೋಕದಲ್ಲಿ ಹೊಸ ಅಧ್ಯಾಯವನ್ನೇ ಶುರು ಮಾಡಿದ್ಲು. ಹೀಗಿದ್ದವಳು ಕಳೆದ ಮೂರು ದಿನದ ಹಿಂದೆ ಇದ್ದಕ್ಕಿದ್ದಂಗೆ ನಾಪತ್ತೆಯಾಗ್ತಾಳೆ. ಸ್ನೇಹಿತರಲ್ಲೂ ಕುಟುಂಬಸ್ಥರಲ್ಲೂ ಎಲ್ಲಾ ಕಡೆ ವಿಚಾರಿಸಿದ್ರೂ ಈ ರೈಮಾ ಬಗ್ಗೆ ಸಣ್ಣದೊಂದು ಸುಳಿವು ಕೂಡ ಸಿಗಲ್ಲ. ಕೊನೆಗೆ ಬೇರೆ ದಾರಿ ಕಾಣದೆ ರೈಮಾ ಪತಿ ಶೇಕಾವತ್ ಅಲಿ ನೇರವಾಗಿ ಬಾಂಗ್ಲಾದ ಕಲಬಾಗನ್ ಪೊಲೀಸ್ ​ಠಾಣೆಯಲ್ಲಿ ದೂರು ದಾಖಲು ಮಾಡ್ತಾನೆ.

ನಟಿ ಇಸ್ಲಾಂ ಶಿಮು ನಾಪತ್ತೆ ಅನ್ನೋ ಮ್ಯಾಟರ್​ ಬಾಂಗ್ಲಾದಾದ್ಯಂತ ಕಾಡ್ಗಿಚ್ಚಿನಂತೆ ಹರಡಿ ಬಿಡುತ್ತೆ. ಬಾಂಗ್ಲಾದ ಫೇಮಸ್​ ನಟಿ ಮಾತ್ರವಲ್ಲದೇ ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹಾಯಕ ಸದಸ್ಯರಾಗಿದ್ದ ರೈಮಾ ಇಸ್ಲಾಂ ಶಿಮು ನಾಪತ್ತೆಯಾಗಿರುವುದರಿಂದ ಪೊಲೀಸರ ಮೇಲೂ ಸಹಜವಾಗಿಯೇ ಒತ್ತಡ ಬೀಳುತ್ತದೆ. ಪೊಲೀಸರೂ ಕೂಡ ಈಕೆಯ ಹುಡುಕಾಟ ನಡೆಸ್ತಾರೆ. ಆದ್ರೆ ಎಷ್ಟೇ ಹುಡುಕಾಡಿದ್ರೂ ನೋ ಯೂಸ್. ಹೀಗಿದ್ದಾಗ ಒಂದು ದಿನ ಪೊಲೀಸರಿಗೆ ಸ್ಥಳೀಯರು ಕಾಲ್​ ಮಾಡಿ ಅದೊಂದು ಗೋಣಿ ಚೀಲದ ಬಗ್ಗೆ ಮಾಹಿತಿ ಕೊಡ್ತಾರೆ.

ಒಂದು ಕಡೆ ಪೊಲೀಸರು ರೈಮಾಗೆ ಹುಡುಕಾಡುತ್ತಿದ್ರೆ, ಅತ್ತ ಬಾಂಗ್ಲಾ ರಾಜಧಾನಿ ಢಾಕಾ ಹೊರವಲಯದ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಗೋಣಿಚೀಲವೊಂದು ಪತ್ತೆಯಾಗಿತ್ತು. ಅನುಮಾನಗೊಂಡ ಸ್ಥಳೀಯರು ಗೋಣಿ ಚೀಲವನ್ನ ಹೋಗಿ ನೋಡಿದಾಗ ಅದರಲ್ಲಿ ಯುವತಿಯ ಕೊಳೆತ ಶವ ಇತ್ತು. ಕೂಡಲೇ ಸ್ಥಳೀಯರು ಕಲಬಾಗನ್ ಠಾಣೆಗೆ ಮಾಹಿತಿ ಕೊಡ್ತಾರೆ. ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ಸ್ಪಾಟ್​ಗೆ ಎಂಟ್ರಿ ಕೊಟ್ಟ ಪೊಲೀಸರು, ಗೋಣಿ ಚೀಲದಲ್ಲಿದ್ದ ಶವವನ್ನ ಹೊರ ತೆಗೆಯುತ್ತಾರೆ. ಕೊಳೆತ ಸ್ಥಿತಿಯಲ್ಲಿದ್ದ ಮೃತದೇಹದ ಮೇಲೆ ಹಲವು ಗಾಯಗಳು ಇರುವುದುನ್ನ ಪೊಲೀಸರು ಪತ್ತೆ ಮಾಡಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜಿಗೆ ರವಾನಿಸ್ತಾರೆ. ಇದರಿಂದ ಪೊಲೀಸರಿಗೆ ಇದೊಂದು ಹತ್ಯೆ ಅನ್ನೋದು ಕನ್​ಫರ್​ಮ್​ ಆಗುತ್ತೆ. ರೈಮಾ ಇಸ್ಲಾಂ ಶಿಮು ಅವರನ್ನು ಕೊಲೆ ಮಾಡಿ, ನಂತರ ಅವರ ಮೃತದೇಹವನ್ನು ಸೇತುವೆಯ ಬಳಿ ಎಸೆದಿದ್ದಾರೆ ಅನ್ನೋದು ಗೊತ್ತಾಗ್ತಿದ್ದಂಗೆ, ಪೊಲೀಸರು ಕೊಲೆ ಪ್ರಕರಣವನ್ನ ದಾಖಲಿಸಿಕೊಂಡು ತನಿಖೆಯ ಆಳಕ್ಕೆ ಇಳಿದು ಬಿಡ್ತಾರೆ. ನಾಪತ್ತೆಯಾಗಿದ್ದ ರೈಮಾ ಶವವಾಗಿ ಪತ್ತೆಯಾದ ಬಳಿಕ ಪೊಲೀಸರ ತಲೆಯಲ್ಲಿ, ಈಕೆಯನ್ನ ಕೊಂದಿದ್ದು ಯಾರು ಅನ್ನೋ ಪ್ರಶ್ನೆ ಗಿರಕಿ ಹೊಡೆಯೋಕೆ ಶುರು ಮಾಡುತ್ತೆ. ಪ್ರಕರಣದ ಮತ್ತಷ್ಟು ಆಳಕ್ಕೆ ಇಳಿದಾಗ್ಲೇ ಗೊತ್ತಾಗಿದ್ದು ಆ ಹಂತಕ ಯಾರು ಅನ್ನೋದು.

ಮಿಸ್ಸಿಂಗ್ ಕೇಸ್ ದಾಖಲು ಮಾಡಿದವನೇ ಕಡೆಗೆ ಅಂದರ್..!
ಇಲ್ಲೇ ಇರುವುದು ನೋಡಿ ಈ ಸ್ಟೋರಿಯ ಅಸಲಿ ಕ್ಲೈಮಾಕ್ಸ್. ಪೊಲೀಸರಿಗೆ ಅದ್ಯಾಕೋ ರೈಮಾ ಪತಿ ಅಲಿ ಮೇಲೆ ಡೌಟ್​ ಬಂದಿತ್ತು. ಯಾವುದಕ್ಕೂ ಇರಲಿ ಎಂದೂ ಆತನನ್ನ ಠಾಣೆಗೆ ಕರೆಸಿದ ಪೊಲೀಸರು ತಮ್ಮದೇ ಸ್ಟೈಲಲ್ಲಿ ವಿಚಾರಣೆ ನಡೆಸಿದಾಗ, ಅಲಿ ಪೊಲೀಸರ ಎದುರು ಎಲ್ಲಾ ಮ್ಯಾಟರ್​ ಹೇಳ್ತಾನೆ. ತಾನೇ ತನ್ನ ಪತ್ನಿಯನ್ನ ಕೈಯಾರೆ ಕೊಂದಿರುವುದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡು ಬಿಡ್ತಾನೆ.

ರೈಮಾ ಇಸ್ಲಾಂ ಶಿಮುರನ್ನ ಪತಿ ಕೊಂದಿದ್ಯಾಕೆ..?
ರೈಮಾ ಇಸ್ಲಾಂ ಶಿಮುರ ಹತ್ಯೆಯ ಕಾರಣ ಏನು ಅನ್ನೋದು ತನಿಖೆ ನಡೆಸಿದಾಗ ಪೊಲೀಸರಿಗೆ ಮೇಲ್ನೋಟಕ್ಕೆ ಗೊತ್ತಾಗಿದ್ದು ಕೌಟುಂಬಿಕ ಕಲಹದ ಮ್ಯಾಟರ್. ಅದಾಗ್ಲೆ ಸಿನಿ ದುನಿಯಾದಲ್ಲಿ ಮಿಂಚುತ್ತಿದ್ದ ರೈಮಾ ಹಾಗೂ ಆಕೆಯ ಪತಿ ಅಲಿ ನಡುವೆ ಬಿರುಕು ಮೂಡಿತ್ತು. ಇಬ್ಬರ ನಡುವೆ ಕೆಲ ವಿಷಯಗಳಿಗೆ ಸಂಬಂಧ ಪಟ್ಟಂತೆ ಆಗಾಗ ಜಗಳ ನಡೆಯುತಿತ್ತು. ಅದರಂತೆ ಮೂರು ದಿನಗಳ ಹಿಂದೆ ಕೂಡ ಇಬ್ಬರ ನಡುವೆ ಜಗಳ ನಡೆದಿದೆ. ಮಾತಿಗೆ ಮಾತು ಬೆಳೆದು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಕೋಪಿತಗೊಂಡ ಪತಿ ಅಲಿ, ಆಕೆಯನ್ನ ಹೊಡೆದು ಕೊಂದೇ ಬಿಟ್ಟಿದ್ದ. ಮುಂದೆ ತನ್ನ ಸ್ನೇಹಿತರ ಮುಖಾಂತರ ಮನೆಯಲ್ಲಿದ್ದ ಶವವನ್ನ ಗೋಣಿ ಚೀಲದಲ್ಲಿ ತುಂಬಿ ಕೆರಣಿಗಂಜ್‌ನ ಹಜರತ್‌ಪುರ ಸೇತುವೆಯ ಬಳಿ ಎಸೆದು ಎಸ್ಕೇಪ್ ಆಗಿದ್ದ. ಮುಂದೆ ತಮಗೇನು ಗೊತ್ತೆ ಇಲ್ಲ ಅನ್ನೋ ಹಾಗೆ ನಾಟಕ ಮಾಡಿದ್ದಾನೆ. ತಾನೇ ಸ್ಟೇಷನ್​ಗೆ ಹೋಗಿ ಮಿಸ್ಸಿಂಗ್​ ಕಂಪ್ಲೇಂಟ್ ಕೂಡ ಕೊಟ್ಟಿದ್ದಾನೆ.ಆದ್ರೆ ಇದೀಗ ಎಲ್ಲರೂ ತಗ್ಲಾಕೊಂಡಿದ್ದಾರೆ. ಪೊಲೀಸರು ರೈಮಾ ಪತಿ ಅಲಿ, ಶವವನ್ನ ಸಾಗಿಸಲು ಸಹಾಯ ಮಾಡಿದ ಕಾರು ಚಾಲಕ, ಅದ್ಕೆ ಸಹಕರಿಸಿದ ಅಲಿಯ ಸ್ನೇಹಿತರನ್ನ ಜೈಲಿಗಟ್ಟಿದ್ದಾರೆ..

Advertisement
Advertisement
Previous Post

ಮಂಗಳೂರು: ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ನಡೆಸುವಾಗಲೇ ಎದ್ದು ಕುಳಿತ ವ್ಯಕ್ತಿ..!!

Next Post

ಹನಿಟ್ರಾಪ್ ಜಾಲ ಭೇಧಿಸಿದ ಮಂಗಳೂರು ಸಿಸಿಬಿ: ಇಬ್ಬರ ಬಂಧನ, ಚಿನ್ನಾಭರಣ ವಶ..!!

OtherNews

ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!
ಪುತ್ತೂರು

ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲೇ ಭರ್ಜರಿ ಪ್ರಶಂಶೆ ಪಡೆದ ತೆನ್ಕಾಯಿಮಲೆ ಕಿರುಚಿತ್ರ..!!

September 15, 2025
ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!
ನಿಧನ

ಗಣಪ ಖ್ಯಾತಿಯ ನಟ ಸಂತೋಷ್ ಬಾಲರಾಜ್ ನಿಧನ..!

August 5, 2025
ಜ.23ಕ್ಕೆ ತುಳು ಕನ್ನಡ ಚಿತ್ರ ಕಟ್ಟೆಮಾರ್ ಬಿಡುಗಡೆಗೆ ಕ್ಷಣಗಣನೆ..!!
ಮಂಗಳೂರು

ಜ.23ಕ್ಕೆ ತುಳು ಕನ್ನಡ ಚಿತ್ರ ಕಟ್ಟೆಮಾರ್ ಬಿಡುಗಡೆಗೆ ಕ್ಷಣಗಣನೆ..!!

August 2, 2025
ನಟಿ ರಮ್ಯಾಗೆ ಅವಹೇಳನ – ಮೂವರು ಅರೆಸ್ಟ್‌..!!
ಕ್ರೈಮ್

ನಟಿ ರಮ್ಯಾಗೆ ಅವಹೇಳನ – ಮೂವರು ಅರೆಸ್ಟ್‌..!!

August 2, 2025
ಪುತ್ತೂರಿನ ಸಂಜನ್ ಕಜೆ ನಟನೆಯ ಯೋಗರಾಜ್ ಭಟ್ ಸಾಹಿತ್ಯದ “ ಮತ್ತೆ ಮೊದಲಿಂದ” ಕನ್ನಡ ಆಲ್ಬಮ್ ನ ಮೊದಲ ಹಾಡು “ನೀಲಿ” ಬಿಡುಗಡೆ..!!!
ಪುತ್ತೂರು

ಪುತ್ತೂರಿನ ಸಂಜನ್ ಕಜೆ ನಟನೆಯ ಯೋಗರಾಜ್ ಭಟ್ ಸಾಹಿತ್ಯದ “ ಮತ್ತೆ ಮೊದಲಿಂದ” ಕನ್ನಡ ಆಲ್ಬಮ್ ನ ಮೊದಲ ಹಾಡು “ನೀಲಿ” ಬಿಡುಗಡೆ..!!!

June 19, 2025
ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ..!!
Featured

ಕೊಟ್ಟಿಯೂರು ದೇವಸ್ಥಾನಕ್ಕೆ ಭೇಟಿ ಕೊಟ್ಟ ನಟ ದರ್ಶನ್ ದಂಪತಿ..!!

June 18, 2025

Leave a Reply Cancel reply

Your email address will not be published. Required fields are marked *

Recent News

ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಆರೋಪಿಯ ಕಾಲಿಗೆ ಗುಂಡು..!!

October 22, 2025
ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

ಕುದ್ರೆಬೆಟ್ಟು ವಿನಲ್ಲಿ ರಾರಾಜಿಸುತ್ತಿದೆ ವಿಶೇಷ ಪರಿಕಲ್ಪನೆಯ ಗೂಡುದೀಪ..!

October 21, 2025
ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

ವಿಟ್ಲ: ಬಾವಿಗೆ ಹಾರಿ ಆತ್ಮಹತ್ಯೆ ..!!

October 21, 2025
ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

ಪುತ್ತೂರು: ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದವರ ಬಿಲ್ ಪಾವತಿಸಿದ ಶಾಸಕ ಅಶೋಕ್ ರೈ..!

October 21, 2025
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

No Result
View All Result

© 2020 Zoomin TV. All Rights Reserved. Website made with ❤️ by The Web People.

You cannot copy content of this page