ಪುತ್ತೂರು: ಗುಡ್ಡವೊಂದಕ್ಕೆ ಬೆಂಕಿ ಬಿದ್ದು ಸಂಪೂರ್ಣ ಗುಡ್ಡ ಬೆಂಕಿಗಾಹುತಿಯಾದ ಘಟನೆ ಆನೆಮಜಲಿನಲ್ಲಿ ನಡೆದಿದೆ.
ಬೀಡಿ ಲೇಬಲ್ ಅನ್ನು ರಾಶಿ ಮಾಡಿ ಹೊತ್ತಿಸುವ ಕಾರಣಕ್ಕಾಗಿ ಬೆಂಕಿ ಹಾಕಿದ್ದು, ಆದರೇ ಆ ಬೆಂಕಿ ಸಂಪೂರ್ಣ ಗುಡ್ಡಕ್ಕೆ ಪಸರಿಸಿದೆ ಎನ್ನಲಾಗಿದೆ.
ಬೆಂಕಿ ಸಂಪೂರ್ಣ ಗುಡ್ಡಕ್ಕೆ ಹರಡಿದ್ದು, ತಕ್ಷಣ ಸ್ಥಳಾಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ ಎಂದು ತಿಳಿದು ಬಂದಿದೆ.