ಮಂಗಳೂರು: ಕೇರಳ ಸರ್ಕಾರ ಕಳುಹಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಜ.26ರ ಗಣರಾಜ್ಯೋತ್ಸವ ಪೆರೇಡ್ ಗೆ ಅನುಮತಿ ನಿರಾಕರಿಸಿದ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಇಡೀ ಬಿಲ್ಲವ ಸಮಾಜ ಎದ್ದು ನಿಂತಿದ್ದು, ಜ. 26 ಹಿರಿಯ ಕಾಂಗ್ರೇಸ್ ನಾಯಕ , ಬಿಲ್ಲವ ಮುಖಂಡ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ “ಸ್ವಾಭಿಮಾನದ ನಡಿಗೆ” ನಡೆಯಲಿದೆ.
ಜ. 26ರಂದು ಹಿರಿಯ ಕಾಂಗ್ರೇಸ್ ನಾಯಕ , ಬಿಲ್ಲವ ಮುಖಂಡ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿಯವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ “ಸ್ವಾಭಿಮಾನದ ನಡಿಗೆ” ಗೆ ಹಿಂದೂ ಜಾಗರಣ ವೇದಿಕೆ ಬೆಂಬಲ ವ್ಯಕ್ತಪಡಿಸಿದೆ.
ಪ್ರತಿ ತಾಲೂಕಿನಿಂದ ಜ.26 ರಂದು ಮಹಾನ್ ಸಮಾಜ ಸುಧಾರಕ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಲಿದೆ. ಜನಾರ್ಧನ ಪೂಜಾರಿಯವರ ಸ್ತಬ್ಧಚಿತ್ರವನ್ನು ಸ್ವಾಗತ ಮಾಡಲಿದ್ದಾರೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರ ಮೆರವಣಿಗೆಗೆ ಹಿಂದು ಜಾಗರಣ ವೇದಿಕೆ ಕರ್ನಾಟಕ ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.