ಮಂಗಳೂರು: ದಕ್ಷಿಣ ರೈಲ್ವೆ ಮೂರು ಹೊಸ ರೈಲುಗಳ ಸಂಚಾರ ಆರಂಭಿಸಲಿದೆ. 2022ರ ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಪ್ರಸ್ತಾವನೆ ಮಂಡನೆ ಮಾಡಲಾಗುತ್ತಿದೆ. ಶೀಘ್ರವೇ ಈ ಕುರಿತು ಘೋಷಣೆಯಾಗಲಿದೆ.
ಮಂಗಳೂರು ಸೆಂಟ್ರಲ್‌ನಿಂದ ಈ ರೈಲುಗಳು ಸಂಚಾರ ನಡೆಸಲಿವೆ. ಇವುಗಳಲ್ಲಿ ಮಂಗಳೂರು ಮತ್ತು ಪ್ರಸಿದ್ಧ ಯಾತ್ರಾ ಸ್ಥಳ ತಿರುಪತಿಯ ರೈಲು ಸಹ ಸೇರಿದೆ. ಪಾಲಕ್ಕಾಡ್ ರೈಲು ವಿಭಾಗದ ಸಭೆಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೊಸ ರೈಲುಗಳ ಬೇಡಿಕೆ ಇಟ್ಟಿದ್ದಾರೆ.
ಮಂಗಳೂರು-ತಿರುಪತಿ (ವಯಾ ಹಾಸನ), ಮಂಗಳೂರು-ಅಹಮದಾಬಾದ್ (ವಯಾ ಮಡಗಾಂವ್), ಮಂಗಳೂರು-ಮೀರಜ್ (ವಯಾ ಹಾಸನ ಮತ್ತು ಅರಸೀಕೆರೆ) ರೈಲುಗಳ ಪ್ರಸ್ತಾವನೆಯನ್ನು ಸಭೆಯಲ್ಲಿ ಇಡಲಾಗಿದೆ. ಐಆರ್‌ಟಿಟಿಸಿ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯಲಿದೆ.