ಬೆಟ್ಟಂಪಾಡಿ: ಪುತ್ತೂರು ಜೆಸಿಐ ವತಿಯಿಂದ ಜೇಸಿ ಶಶಿರಾಜ್ ಅಧ್ಯಕ್ಷತೆಯಲ್ಲಿಯುವ ಸಬಲೀಕರಣ ತರಬೇತಿ ಕಾರ್ಯಕ್ರಮ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.26 ರಂದು ನಡೆಯಿತು.
ವಲಯ ಎಕ್ಸ್.ವಿ.ಯ ವಲಯ ತರಬೇತುದಾರರಾದ ಜೆಸಿ.ದಾಮೋದರ ಪಾಟಾಳಿ ತರಬೇತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಕಾಲೇಜಿನ ಪ್ರಾಧ್ಯಾಪಕರಾದ ಹರಿಪ್ರಸಾದ್ (ಎನ್ ಎಸ್ ಎಸ್ ಸಂಯೋಜಕರು) ಕಾರ್ಯಕ್ರಮವನ್ನು ಆರಂಭಿಸಿದರು. ಕಾರ್ಯಕ್ರಮ ನಿರ್ದೇಶಕರಾದ ಜೆಸಿ ಸುಪ್ರೀತ್ ಕೆ ಮಕ್ಕಳಿಗೆ ತರಬೇತುದಾರರ ಕಿರು ಪರಿಚಯ ನೀಡಿದರು.
ಕಾರ್ಯದರ್ಶಿ ಜೆಸಿ ಮೋಹನ್ ಕೆ,, ಉಪಾಧ್ಯಕ್ಷ ಜೆಸಿ ಪ್ರಜ್ವಲ್ ರೈ, ಮೀಡಿಯಾ ನಿರ್ದೇಶಕರಾದ ಜೆಸಿ ಅನಿಶ್ ಪಿ ವಿ, ಸದಸ್ಯರಾದ ಜೆಸಿ ಪ್ರಮಿತಾ ಸಿ ಮತ್ತು ಕಾಲೇಜಿನ ಸಹ ಶಿಕ್ಷಕರು ಭಾಗವಹಿಸಿದರು.
ಕಾಲೇಜಿನ ಸುಮಾರು 160 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡರು. ವಿದ್ಯಾರ್ಥಿ ಸಾರ್ಥಕ್, ವಿದ್ಯಾರ್ಥಿನಿಯರಾದ ಪಲ್ಲವಿ ಮತ್ತು ಶ್ರುತಿಕಾ ತರಬೇತಿಯ ಬಗೆಗಿನ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಜೆಸಿ ಸುಪ್ರೀತ್ ಧನ್ಯವಾದ ಸಮರ್ಪಿಸಿದರು.