ಪುತ್ತೂರು: ಗಣರಾಜ್ಯೋತ್ಸವ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪುತ್ತೂರು ಹಾಗೂ ವಿಟ್ಲ-ಉಪ್ಪಿನಂಗಡಿ ಉಭಯ ಬ್ಲಾಕ್ ಗಳಲ್ಲಿ ‘ದೇಶಕ್ಕಾಗಿ ಸಂವಿಧಾನ ಜೀವಕ್ಕಾಗಿ ರಕ್ತದಾನ’ ಎಂಬ ಶೀರ್ಷಿಕೆಯಡಿಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಜಿಲ್ಲೆಯ 11 ಕಡೆಗಳಲ್ಲಿ ಏಕಕಾಲಕ್ಕೆ ನಡೆದ ಬೃಹತ್ ರಕ್ತದಾನದ ಅಂಗವಾಗಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಭಾಗಿಯಾಗಿದ್ದರು.
ರಕ್ತದಾನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಲುಕ್ಮಾನ್ ಬಂಟ್ವಾಳ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಎಂ.ಬಿ.ವಿಶ್ವನಾಥ ರೈ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಡಾ. ರಾಜಾರಾಂ.ಕೆ.ಬಿ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಎಚ್.ಮೊಹಮ್ಮದ್ ಆಲಿ, ನಗರಸಭಾ ಸದಸ್ಯರಾದ ಮಹಮ್ಮದ್ ರಿಯಾಜ್ ಕೆ, ಯೂಸುಫ್ ಡ್ರೀಮ್ಸ್, ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗಳಾದ ರಂಜಿತ್ ಬಂಗೇರ ಕೆ, ಪುತ್ತೂರು ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಬಾಲಕೃಷ್ಣ ಕೊಳ್ತಿಗೆ, ಪ್ರಧಾನ ಕಾರ್ಯದರ್ಶಿಗಳಾದ ಸನದ್ ಯೂಸುಫ್, ರಶೀದ್ ಮುರ, ಸಿದ್ದೀಕ್ ಸುಲ್ತಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾರದಾ ಅರಸ್, ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್, ಯುವ ನಾಯಕರುಗಳಾದ ಜಿಲ್ಲಾ ಅಸಂಘಟಿತ ಕಾರ್ಮಿಕರ ಘಟಕದ ಸದಸ್ಯರಾದ ಶರೀಫ್ ಬಲ್ನಾಡ್, ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಮುಖರಾದ ಶಕೀಲ್ ದರ್ಬೆ, ಸನತ್ ರೈ, ಯಂಗ್ ಬ್ರಿಗೇಡ್ ನ ಪ್ರಮುಖರಾದ ಉನೈಸ್ ಗಡಿಯಾರ ಮುಂತಾದವರು ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾದ ಡಾ. ರಾಜಾರಾಂ ಕೆ.ಬಿ , ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಚಂದ್ರ ಆಳ್ವಾ, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ಅಭಿಷೇಕ್ ಬೆಳ್ಳಿಪ್ಪಾಡಿ, ವಿಟ್ಲ ನಗರ ಪಂಚಾಯತ್ ಸದಸ್ಯರಾದ ವಿ.ಕೆ.ಎಂ.ಅಶ್ರಫ್ , ಹಸೈನಾರ್ ನೆಲ್ಲಿಗುಡ್ಡೆ, ಡೀಕಯ್ಯ ನಲ್ಕೆ, ಲತಾ ಅಶೋಕ್ ಪೂಜಾರಿ, ಪದ್ಮಿನಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ಕರೀಂ ಕುದ್ದುಪದವು, ಶ್ರೀನಿವಾಸ ಶೆಟ್ಟಿ ಕೊಲ್ಯ, ಅಶೋಕ್ ಪೂಜಾರಿ, ಸಮೀರ್ ಪಳಿಕೆ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರಾದ ರಾಮಣ್ಣ ಪಿಲಿಂಜ, ವಿಟ್ಲ ಯುವ ಕಾಂಗ್ರೆಸ್ ಪ್ರಮುಖರಾದ ಶಿವಪ್ರಸಾದ್ ವಿಟ್ಲ,ಅಶ್ರಫ್ ಮೇಗಿನಪೇಟೆ,ರಾಜೇಶ್ ವಿಟ್ಲ , ಹನೀಫ್, ವಿನ್ಯಾಸ್ ವಿಟ್ಲ , ವಿಶಾಂಕ್ ಕುಮಾರ್ ಉಪಸ್ಥಿತರಿದ್ದರು.
“ರಕ್ತದಾನ ಮಾಡಿ ಸ್ಮಾರ್ಟ್ ಫೋನ್ ಗೆಲ್ಲಿರಿ” ಕಾರ್ಯಕ್ರಮದಲ್ಲಿ ಪುತ್ತೂರು ಬ್ಲಾಕ್ ನಲ್ಲಿ ನೌಫಲ್ ನೆಕ್ಕಿಲಾಡಿ ಹಾಗೂ ವಿಟ್ಲ ಉಪ್ಪಿನಂಗಡಿ ಬ್ಲಾಕ್ ನಲ್ಲಿ ಮೊಹಮ್ಮದ್ ಸಲೀಂ ವಿಜೇತರಾದರು.