ವಿಟ್ಲ: ಲಯನ್ಸ್ ಸೇವಾ ಟ್ರಸ್ಟ್ ನ ಮೂರನೇ ಅವಧಿಗೆ ನೂತನ ಅಧ್ಯಕ್ಷರಾಗಿ ಪ್ರಭಾಕರ ಶೆಟ್ಟಿ ದಂಬೆಕಾನ ಅವರು ಆಯ್ಕೆಯಾಗಿದ್ದಾರೆ.
ಎರಡು ಅವಧಿಯಲ್ಲಿ ಸತೀಶ್ ಕುಮಾರ್ ಆಳ್ವ ಇರಾಬಾಳಿಕೆ ಅಧ್ಯಕ್ಷರಾಗಿದ್ದರು. ಅವರ ಅವಧಿ ಮುಗಿದ ಹಿನ್ನೆಲೆಯಲ್ಲಿ ಪ್ರಭಾಕರ್ ದಂಬೆಕಾನ ಅವರು ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ ಡಾ. ಗೀತಪ್ರಕಾಶ್ ಪಿ.ಎಮ್.ಜೆ.ಎಫ್. , ಕೋಶಾಧಿಕಾರಿಯಾಗಿ ಉಗ್ಗಪ್ಪ ಶೆಟ್ಟಿ, ಪ್ರಥಮ ಉಪಾಧ್ಯಕ್ಷರಾಗಿ ರಾಧಾಕೃಷ್ಣ ನಾಯಕ್, ದ್ವಿತೀಯ ಉಪಾಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಎಮ್.ಜೆ.ಎಫ್., ಕಾನೂನು ಸಲಹೆಗಾರಾಗಿ ಅಬುಬಕ್ಕರ್ ಆಯ್ಕೆಗೊಂಡರು.