ಮಾಡಾವು: ಆಟೋ ರಿಕ್ಷಾ ಮತ್ತು ಜೀಪ್ ಮಧ್ಯೆ ಡಿಕ್ಕಿ ನಡೆದ ಘಟನೆ ಇಂದು ಬೆಳಗ್ಗೆ ಮಾಡಾವು ಕೆಯ್ಯೂರು ನೆಟ್ಟಳ ರಸ್ತೆಯಲ್ಲಿ ನಡೆದಿದೆ.
ಕೆಯ್ಯೂರು ನೆಟ್ಟಾಲದಿಂದ ಕೂಲಿ ಕಾರ್ಮಿಕರನ್ನು ಸಾಗಿಸುತ್ತಿದ್ದ ರಿಕ್ಷಾ ಮತ್ತು ಜೀಪು ನಡುವೆ ಅಪಘಾತ ಸಂಭವಿಸಿದ್ದು, ಜೀಪು ಚಾಲಕ ಕಣಿಯಾರು ಚಂದ್ರಶೇಖರ ಪೂಜಾರಿ ಜೀಪು ಚಲಾಯಿಸುತ್ತಿದ್ದು, ರಿಕ್ಷಾ ಚಾಲಕ ಎತ್ಯಡ್ಕ ಗಿರಿಧರ ಹಾಗೂ ರಿಕ್ಷಾದಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ರಿಕ್ಷಾದಲ್ಲಿದ್ದ ಮೂವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಓರ್ವ ಗಾಯಾಳುವನ್ನು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.