ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ರೈತ ಮೋರ್ಚಾ ಬಂಟ್ವಾಳ ಮಂಡಲ ಮತ್ತು ವಿಟ್ಲ-ಪಡ್ನೂರು ಮಹಾಶಕ್ತಿ ಕೇಂದ್ರದ ವತಿಯಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ವಿಟ್ಲದ ಕೇಪು ಅಮೈನ ಮಹಾಲಿಂಗ ನಾಯ್ಕ ಮತ್ತು ಅವರ ಪತ್ನಿಯನ್ನು ವಿಟ್ಲ-ಪಡ್ನೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ದ.ಕ ಜಿಲ್ಲಾಧ್ಯಕ್ಷರಾದ ಸುದರ್ಶನ್ ಮೂಡಬಿದಿರೆ, ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷರಾದ ದೇವಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಡೊಂಬಯ ಅರಳ ಮತ್ತು ರವೀಶ್ ಶೆಟ್ಟಿ ಕರ್ಕಳ, ವಿಟ್ಲ-ಪಡ್ನೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ರೇಷ್ಮಾ ಶಂಕರಿ ಬಳಿಪಗುಳಿ, ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ಬಿಜೆಪಿ ನಾಯಕರಾದ ಮಾಧವ ಮಾವೆ, ಹಿಂದುಳಿದ ವರ್ಗದ ಜಿಲ್ಲಾ ಸದಸ್ಯರಾದ ಮೋನಪ್ಪ ದೇವಸ್ಯಉಪಸ್ಥಿತರಿದ್ದರು.
ಬಂಟ್ವಾಳ ರೈತ ಮೋರ್ಚಾದ ಅಧ್ಯಕ್ಷರಾದ ವಿಶ್ವನಾಥ ಕಟ್ಟತ್ತಿಲ ಕೋಡಿ ಅತಿಥಿಗಳನ್ನು ಸ್ವಾಗತಿಸಿದರು. ಬಿಜೆಪಿ ಮಹಾಶಕ್ತಿಕೇಂದ್ರದ ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಮೂರ್ಜೆಬೆಟ್ಟು ಮತ್ತು ವೀರೇಂದ್ರ ಕುಲಾಲ್ ಸಜಿಪ ಅತಿಥಿಗಳಿಗೆ ಹೂಗುಚ್ಚ ನೀಡಿ ಗೌರವಿಸಿದರು. ಸನ್ಮಾನ ಪತ್ರವನ್ನು ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗೌಡ ಓದಿದರು. ಬಂಟ್ವಾಳ ಎಸ್.ಟಿ. ಮೋರ್ಚಾದ ಅಧ್ಯಕ್ಷರು ರಾಮ ನಾಯ್ಕ, ಹಿರಿಯ ಕಾರ್ಯಕರ್ತರಾದ ಗೋಪಾಲಕೃಷ್ಣ ಭಟ್ ಬೊಳ್ಳೆಚ್ಚಾರು, ಜಯರಾಮ ಆಚಾರ್ಯ, ಪ್ರಗತಿಪರ ಕ್ರಷಿಕರಾದ ನಾರಯಣ್ ಭಟ್ ಪಳ್ಳಿಗದ್ದೆ, ಮೇಘಶ್ಯಾಮ ಅಂಗ್ರಿ, ಎಕೋವಿಷನ್ ಬಳಿಪಗುಳಿ ಇದರ ಮಾಲಕರಾದ ಉದ್ಯಮಿ ರಾಜಾರಾಮ್ ಭಟ್ ಬಳಿಪಗುಳಿ, ಪಂಚಾಯತ್ ಸದಸ್ಯರಾದ ಹರಿ-ಕಿಶೋರ್, ಜಯಂತ, ರೇಖಾ, ಅಮಿತ ಕೊಳ್ನಾಡು ಗ್ರಾಮ ಪಂಚಾಯತ್ ಸದಸ್ಯರಾದ ರಾಜಾರಾಮ್ ಹೆಗ್ಡೆ ಕುದ್ರಿಯ, ಮೈತ್ರೇಯಿ ಗುರುಕುಲಂನ ವ್ಯವಸ್ಥಾಪಕರಾದ ಜಗ್ಗನ್ನಾಥ ಕಾಸರಗೋಡು, ಬೂತ್ ಕಾರ್ಯದರ್ಶಿ ಪ್ರವೀಣ್ ಎಸ್.ಕೆ ಮತ್ತು ಚರಣ್ ಕೆ. ಕಾಪುಮಜಲು ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ರಮೇಶ್ ರಾವ್ ಪತ್ತುಮುಡಿ ಕಾರ್ಯಕ್ರಮ ನಿರೂಪಣೆಗೈದರು. ವಿಟ್ಲ-ಪಡ್ನೂರು ಮಹಾಶಕ್ತಿಕೇಂದ್ರದ ಅಧ್ಯಕ್ಷರಾದ ಸನತ್ ಕುಮಾರ್ ರೈ ಧನ್ಯವಾದಗೈದರು.