ವಿಟ್ಲ: ಒಡಿಯೂರು ಶ್ರೀ ಗುರುದೇವಾನಂದ ಸ್ವಾಮಿಗಳ ಷಷ್ಠ್ಯಬ್ದ ಸಂಭ್ರಮ 2021 ಜ್ಞಾನವಾಹಿನಿ ವಿಟ್ಲ ವಲಯ ಸಮಿತಿ ಇದರ ವತಿಯಿಂದ ಶ್ರೀ ಗುರುವಂದನೆ, ಹನುಮಾನ್ ಚಾಲೀಸಾ ಪಠಣ, ಸಾಧಕರಿಗೆ ಸನ್ಮಾನ ಮತ್ತು 60 ಅರ್ಹ ಮಹಿಳೆಯರಿಗೆ ಸೀರೆ ವಿತರಣೆ ಸಮಾರಂಭವು ಫೆ.9 ರಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕೃಷ್ಣಯ್ಯ ಕೆ ವಿಟ್ಲ ಅರಮನೆ, ಪ್ರಸಾದ್ ಬನ್ನಿಂತಾಯ, ಮೋನಪ್ಪ ಗೌಡ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ರಾಮದಾಸ ಶೆಣೈ, ಅರುಣ್ ವಿಟ್ಲ, ಕಾವ್ಯಲಕ್ಷ್ಮೀ , ಹೇಮಾನಂದ ಶೆಟ್ಟಿ, ಗಣೇಶ್ ರೈ, ಪದ್ಮನಾಭ ಗೌಡ, ರಾಜೇಶ್ ವಿಟ್ಲ, ಸಂಜೀವ ಪೂಜಾರಿ, ಬಾಲಕೃಷ್ಣ ವಿಟ್ಲ ಹಾಗೂ ಮತ್ತಿತರರು ಉಪಸ್ಥಿತರಿದ್ದರು.