ಸುಳ್ಯ: ನದಿಯಲ್ಲಿ ಮುಳುಗಿ ಆರು ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಸುಳ್ಯ ತಾಲೂಕು ಪೈಚಾರು ದೊಡ್ಡೇರಿ ಎಂಬಲ್ಲಿ ನಡೆದಿದೆ.
ಆಂಧ್ರ ಮೂಲದ ಕುಟುಂಬಸ್ಥರು ಪೈಚಾರು ಬಳಿ ಬುಟ್ಟಿ ಹೆಣೆಯುವ ಕೆಲಸ ಮಾಡುತ್ತಿದ್ದು, ಅಲ್ಲೇ ಪರಿಸರದಲ್ಲಿ ಟೆಂಟ್ ನಿರ್ಮಿಸಿ ವಾಸಿಸುತ್ತಿದ್ದರು ಎನ್ನಲಾಗಿದೆ.
ನದಿಗೆ ಸ್ನಾನ ಮಾಡಲೆಂದು ಕುಟುಂಬದ ಹಿರಿಯರು ಮತ್ತು ಮಕ್ಕಳು ಹೋಗಿದ್ದು, ಸ್ನಾನ ಮಾಡುತ್ತಿದ್ದ ಸಂದರ್ಭ ಆರು ವರ್ಷದ ಮಗು ಕುಪ್ಪರಾ ಕಾಣೆಯಾಗಿದ್ದು, ಆತ ನೀರಿನಲ್ಲಿ ಮುಳುಗಿರುವ ಅನುಮಾನದಿಂದ ಹುಡುಕಾಡಿದಾಗ ಪಕ್ಕದಲ್ಲಿ ಆತನ ಮೃತದೇಹ ಲಭಿಸಿದೆ ಎಂದು ತಿಳಿದು ಬಂದಿದೆ.