ಬೈಕ್ ಗಳ ನಡುವೆ ನಡೆದ ಅಪಘಾತದಲ್ಲಿ ಓರ್ವ ಸ್ಥಳದಲ್ಲೇ ಮೃತಪ್ಪಟ ಹಾಗೂ ಇಬ್ಬರು ಗಂಭೀರ ಗಾಯಗೊಂಡ ಘಟನೆ ಪೆರಾಜೆಯಲ್ಲಿ ನಡೆದಿದೆ.
ಗಾಯಗೊಂಡ ಇಬ್ಬರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೃತ ಬೈಕ್ ಸವಾರ ಕೇರಳದ ಪಯ್ಯನ್ನೂರು ನಿವಾಸಿ ಎಂದು ಹೇಳಲಾಗುತ್ತಿದ್ದು , ಅವರ ಹೆಸರು ಪ್ರದೀಪ್ ಎಂದು ತಿಳಿದುಬಂದಿದೆ.
ಕಲ್ಲುಗುಂಡಿಯ ಯುವಕರಾದ ಸುಮಂತ್ ಮತ್ತು ರವಿ ಅವರ ಸ್ಥಿತಿಯೂ ಗಂಭೀರವಾಗಿರುವುದಾಗಿ ಹೇಳಲಾಗಿದೆ.



























