ಸುಳ್ಯ: ನ್ಯಾಯವಾದಿ ಹರೀಶ್ ಎಂಬವರ ಪುತ್ರಿ ನಿಹಾರಿಕಾ( 13) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುತ್ತಿಗಾರಿನ ಪೂಜಾರಿ ಕೋಡಿ ಎಂಬಲ್ಲಿ ನಡೆದಿದೆ.
ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯ ವಿದ್ಯಾರ್ಥಿನಿಯಾಗಿದ್ದ ನಿಹಾರಿಕಾ ಈ ಬಾರಿ ನವೋದಯ ಶಾಲೆಗೆ ಏಳನೇ ತರಗತಿಗೆ ಆಯ್ಕೆಯಾಗಿದ್ದಳು.
ಕೊರೊನಾ ಕಾರಣದಿಂದಾಗಿ ಶಾಲೆ ಆರಂಭಗೊಳ್ಳದೆ, ಮನೆಯಲ್ಲಿಯೇ ನವೋದಯದ ಆನ್‌ಲೈನ್ ತರಗತಿ ನಡೆಯುತ್ತಿತ್ತು.
ಹರೀಶ್ ರವರು ಮನೆಯಿಂದ ಹೊರಟು ಸುಳ್ಯದ ಕಡೆಗೆ ಬಂದ ಸ್ವಲ್ಪ ಹೊತ್ತಲ್ಲೇ ಬಾಲಕಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ. ತಕ್ಷಣ ಮನೆಯವರು ಆಸ್ಪತ್ರೆಗೆ ಕರೆ ತಂದಿದ್ದು, ಅಷ್ಟರಲ್ಲಾಗಲೇ ಬಾಲಕಿ ಮೃತ ಪಟ್ಟಿದ್ದಳೆನ್ನಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.