ಪುತ್ತೂರು: ಮುಳಿಯ ಪ್ರಸ್ತುತ ಪಡಿಸುವ ಮುಳಿಯ “ಗಾನರಥ” ಐದನೇ ಆಡಿಷನ್ ರೌಂಡ್ ಕರೋಕೆ ಹಾಡುಗಳ ಗಾಯನ ಸ್ಪರ್ಧೆಯು ಫೆ.5 ರಂದು ಸಂಜೆ ಬೆಳ್ಳಾರೆ ಅಮ್ಮು ರೈ ದೇವಿ ಹೈಟ್ಸ್ ಕಾಂಪ್ಲೆಕ್ಸ್ ನ ಮುಂಭಾಗದಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರ ವಯೋಮಿತಿ 12 ರಿಂದ 21 ವರ್ಷ, ಸಾರ್ವಜನಿಕರ ವಿಭಾಗದಲ್ಲಿ 21 ವರ್ಷ ಮೇಲ್ಪಟ್ಟು ಆಗಿರಬೇಕು. ಕನ್ನಡ, ಹಿಂದಿ, ತುಳು ಹಾಗೂ ಮಲಯಾಳಂ ನಾಲ್ಕು ಭಾಷೆಯ ಹಾಡುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ.
ಕಾರ್ಯಕ್ರಮವನ್ನು ಮುಳಿಯ ಜ್ಯುವೆಲ್ಸ್ ನ ಫೇಸ್ಬುಕ್ ಮುಖಾಂತರ ವೀಕ್ಷಿಸಬಹುದಾಗಿದೆ. ಆಡಿಷನ್ ನೋಂದಾವಣೆಗಾಗಿ 9743175916 ಕರೆ ಮಾಡಬಹುದಾಗಿದೆ..




























