ಪುತ್ತೂರು: ಬೈಕ್ ಮತ್ತು ಲಾರಿ ನಡುವೆ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಮತ್ತು ಸಹಸವಾರೆ ಗಂಭೀರ ಗಾಯಗೊಂಡ ಘಟನೆ ಫೆ.3 ರಂದು ಸಂಪ್ಯದಲ್ಲಿ ನಡೆದಿದೆ.
ಗಂಭೀರ ಗಾಯಗೊಂಡ ಸಹಸವಾರೆ ಯುವತಿಯನ್ನು ಬೆಟ್ಟಂಪಾಡಿ ಹರಿನಾರಾಯಣ ಭಟ್ ರವರ ಮಗಳು, ಬೆಟ್ಟಂಪ್ಪಾಡಿ ಕಾಲೇಜು ವಿದ್ಯಾರ್ಥಿನಿ ಭಾಗ್ಯಲಕ್ಷ್ಮಿ ಮತ್ತು ಬೈಕ್ ಸವಾರ ನನ್ನು ಪ್ರಮೋದ್ ಎನ್ನಲಾಗಿದೆ.
ಅಪಘಾತದಿಂದಾಗಿ ಭಾಗ್ಯಲಕ್ಷ್ಮಿ ರವರ ಕಾಲಿಗೆ ಗಂಭೀರ ಗಾಯವಾಗಿದ್ದು, ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದು ಬಂದಿದೆ.