ಪುತ್ತೂರು: ಬನ್ನೂರು ಮೆಸ್ಕಾಂ ಕಚೇರಿ ಆಕೌಂಟೆಂಟ್ ಯಶಕಲ (55) ರವರು ಫೆ.5 ರಂದು ತಡ ರಾತ್ರಿ ಹೃದಯಾಘಾತಕ್ಕೊಳಗಾಗಿ ನಿಧನರಾದರು.
ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ಆಗಿದ್ದ ದಿ.ಗಂಗಾಧರ ಗೌಡರ ಪತ್ನಿಯಾಗಿರುವ ಯಶಕಲ ರವರು ಬನ್ನೂರು ರೀಜನಲ್ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಫೆ.5 ರಂದು ರಾತ್ರಿ ಅವರು ಮನೆಯಲ್ಲಿದ್ದ ವೇಳೆ ಆವರಿಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆಂದು ಕರೆದೊಯ್ಯುತ್ತಿದ್ದ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರು ಉದ್ಯಮಿಯಾಗಿರುವ ಪುತ್ರ ಶರಣ್, ತಂದೆ ನಾಗಣ್ಣ ಗೌಡ, ತಾಯಿ ಪುಷ್ಪಾವತಿ, ಇಬ್ಬರು ಸಹೋದರರು ಮತ್ತು ಸಹೋದರಿಯನ್ನು ಅಗಲಿದ್ದಾರೆ.