ಪುತ್ತೂರು: ಡಿ.21 ರಂದು ಅರಣ್ಯ ಇಲಾಖೆಯ ನೇಮಕಾತಿಗೆ ಸಂಬಂಧಿಸಿದ ಅರಣ್ಯ ರಕ್ಷಕ (ಫಾರೆಸ್ಟ್ ಗಾರ್ಡ್) ಹುದ್ದೆಗೆ ನಡೆದ ಲಿಖಿತ ಪರೀಕ್ಷೆಯಲ್ಲಿ ದ.ಕ ಜಿಲ್ಲೆಗೆ ನಾಲ್ಕನೇ ಸ್ಥಾನದಲ್ಲಿ ಶೇಕಡಾ 73.08 ಅಂಕಗಳೊಂದಿಗೆ ಪುತ್ತೂರು ತಾಲ್ಲೂಕು ಕೆದಂಬಾಡಿ ಗ್ರಾಮದ ಆನಂದ ರೈ ಕೆದಂಬಾಡಿ ಮಠ, ಸುಭಾಷಿಣಿ ದಂಪತಿಗಳ ಪುತ್ರ ಸನತ್ ಕುಮಾರ್ ರೈ ಆಯ್ಕೆಯಾಗಿದ್ದಾರೆ.
ವಿವೇಕಾನಂದ ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಮುಗಿಸಿ, ಪ್ರಸ್ತುತ ಪುತ್ತೂರಿನ ಎ. ಪಿ.ಯಂ.ಸಿ ರಸ್ತೆಯಲ್ಲಿರುವ ಐ. ಎ. ಎಸ್. ಸೇರಿದಂತೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುತ್ತಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಕಳೆದ ಆರು ತಿಂಗಳಿನಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸನತ್ ಕುಮಾರ್ ರೈ ಪಡೆಯುತ್ತಿದ್ದರು.
ವಿದ್ಯಾಮಾತಾ ಅಕಾಡೆಮಿಯ ಮಾತೃಸಂಸ್ಥೆ ವಿದ್ಯಾಮಾತಾ ಫೌಂಡೇಶನ್ ನ “ವಿದ್ಯಾನಿಧಿ” ಯೋಜನೆ ಮೂಲಕ ಸನತ್ ಕುಮಾರ್ ರೈ ಗೆ ವಿದ್ಯಾಮಾತಾ ಅಕಾಡೆಮಿಯಲ್ಲಿ ಸ್ಥಾಪಕರಾದ ಭಾಗ್ಯೇಶ್ ರೈ ರವರು ಉಚಿತ ತರಬೇತಿಯನ್ನು ನೀಡುತ್ತಿದ್ದರು. ವಿದ್ಯಾಮಾತಾ ಅಕಾಡೆಮಿಯಲ್ಲಿ ಸನತ್ ಕುಮಾರ್ ರೈ ಪೊಲೀಸ್ ಕಾನ್ಸ್ಟ್ ಬಲ್ ಪರೀಕ್ಷೆಗೆ ತಯಾರಿ ನಡೆಸಿ ಪಾಸಾಗಿದ್ದರೂ ದೈಹಿಕ ಕ್ಷಮತೆ ಪರೀಕ್ಷೆಯಲ್ಲಿ ಕೆಲವೇ ಸೆಕೆಂಡುಗಳಲ್ಲಿ ಅನುತ್ತೀರ್ಣರಾಗಿದ್ದರು.
ಕೆಲವು ದಿನಗಳ ಹಿಂದೆ ಮೈಸೂರಿನಲ್ಲಿ ಯು.ಪಿ.ಎಸ್. ಸಿ ಪರೀಕ್ಷೆಯನ್ನು ಕೂಡಾ ಬರೆದಿದ್ದಾರೆ. ಈ ಬಗ್ಗೆ ವಿದ್ಯಾಮಾತಾ ಅಕಾಡೆಮಿ ಯ ಸ್ಥಾಪಕರಾದ ಭಾಗ್ಯೇಶ್ ರೈ ರವರು ಹರ್ಷವನ್ನು ವ್ಯಕ್ತಪಡಿಸಿದ್ದು, ದ.ಕ ಜಿಲ್ಲೆಯಲ್ಲಿ ಇನ್ನಷ್ಟು ಅಭ್ಯರ್ಥಿಗಳು ವಿವಿಧ ಇಲಾಖೆಗಳಿಗೆ ಆಯ್ಕೆಯಾಗುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಹುಮ್ಮಸ್ಸು ಎಲ್ಲಾ ವಿದ್ಯಾರ್ಥಿಗಳಲ್ಲಿ ಬೆಳೆಯುವಂತಾಗಲಿ ಈ ಬಗ್ಗೆ ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಾವು ಪ್ರಯತ್ನಮಾಡುತ್ತಿದ್ದು, ಇವಾಗ ಪ್ರಯತ್ನಕ್ಕೆ ಫಲ ಸಿಗಲು ಪ್ರಾರಂಭವಾಗಿದೆ.
ಸನತ್ ಕುಮಾರ್ ರೈ ಕೂಡಾ ನಿರಂತರ ಕಠಿಣ ಪರಿಶ್ರಮದಿಂದ ಫಾರೆಸ್ಟ್ ಗಾರ್ಡ್ ಹುದ್ದೆಗೆ ಆಯ್ಕೆಯಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಎಲ್ಲಾ ವಿದ್ಯಾರ್ಥಿಗಳು ಹತ್ತನೇ ತರಗತಿಯಿಂದಲೇ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಗಳಿಗೆ ತಯಾರಿಯನ್ನು ನಡೆಸಿದರೆ, ಮುಂದೆ ಉತ್ತಮ ಫಲಿತಾಂಶ ಪಡೆಯಬಹುದು ಎಂದು ತಿಳಿಸಿದ್ದಾರೆ. ಅಲ್ಲದೇ ಪೊಲೀಸ್ ಇಲಾಖೆ ಸೇರಿದಂತೆ ಸರ್ಕಾರಿ ಮಟ್ಟ ದ ವಿವಿಧ ಇಲಾಖೆಗಳ ಅಧಿಕಾರಿಗಳು ವಿದ್ಯಾಮಾತಾ ಅಕಾಡೆಮಿಯ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗ್ರತಿ ಮೂಡಿಸುವ ಕಾರ್ಯಕ್ಕೆ ಕೈ ಜೋಡಿಸಿರುವುದಕ್ಕೆ ಈ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.