ಆಲೆಟ್ಟಿ ರಸ್ತೆಯಲ್ಲಿ ಕೇರಳದ ಬಂದಡ್ಕ ಕಡೆಯಿಂದ ಬರುತ್ತಿದ್ದ ಬೆಲೆನೊ KA 12 MB0650 ಕಾರೊಂದು ಅತೀ ವೇಗದಿಂದ ಬಂದು ನಾಗಪಟ್ಟಣ ವಿಶ್ರಾಂತಿ ಗೃಹದ ಬಳಿಯ ತಿರುವಿನಲ್ಲಿ ಪಲ್ಟಿಯಾದ ಘಟನೆ ಇದೀಗ ನಡೆದಿದೆ. ಕಾರಿನಲ್ಲಿದ್ದ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ.
ಮಡಿಕೇರಿ ಮೂಲದ ಅನ್ಯಕೋಮಿನ ಯುವಕ ಮತ್ತು ಯುವತಿ ಕಾರಿನಲ್ಲಿದ್ದು. ಇವರಿಬ್ಬರು ಕೇರಳದ ಬಂದಡ್ಕ ಕಡೆಯಿಂದ ಕೋಲ್ಚಾರು ಮಾರ್ಗವಾಗಿ ಸುಳ್ಯ ಕಡೆಗೆ ಬರುತ್ತಿದ್ದರೆನ್ನಲಾಗಿದೆ. ಈ ಮಾಹಿತಿ ಪಡೆದ ಕೆಲವರು ಕೋಲ್ಚಾರು ಬಳಿ ಕಾರು ನಿಲ್ಲಿಸಲು ಸೂಚಿಸಿದ್ದರೂ ಇವರು ಲೆಕ್ಕಿಸದೆ ವೇಗವಾಗಿ ಸುಳ್ಯ ಕಡೆಗೆ ಬಂದರೆನ್ನಲಾಗಿದೆ.
ನಾಗಪಟ್ಟಣ ಗೆಸ್ಟ್ ಹೌಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರು ರಸ್ತೆ ಬದಿಯ ಚರಂಡಿಗೆ ಮಗುಚಿ ಬಿತ್ತು. ಪರಿಣಾಮ ಕಾರಲ್ಲಿದ್ದ ಇಬ್ಬರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾ ಪಾಯದಿಂದ ಪಾರಾದರು. ಕಾರು ಸಂಪೂರ್ಣ ನುಜ್ಜುಗುಜ್ಜಾಯಿತು.
ಅತೀ ವೇಗದ ಚಾಲನೆಯ ರಭಸಕ್ಕೆ ಕಾರು ಡಿಕ್ಕಿ ಹೊಡೆದು ವಿರುದ್ದ ದಿಕ್ಕಿನತ್ತ ಮುಖಮಾಡಿ ಪಲ್ಟಿಯಾಗಿತ್ತು. ಸ್ಥಳಕ್ಕೆ ಸುಳ್ಯ ಪೋಲಿಸರು ಆಗಮಿಸಿ ಕಾರಿನಲ್ಲಿದ್ದ ಯುವಕ ಮತ್ತು ಯುವತಿಯನ್ನು ವಿಚಾರಣೆಗೆಂದು ಕೊಂಡೊಯ್ದರೆಂದು ತಿಳಿದು ಬಂದಿದೆ.