ಬೆಳ್ತಂಗಡಿ: ಬಣ್ ಕಲ್ ನಲ್ಲಿ ಅಪಘಾತಕ್ಕೀಡಾಗಿದ್ದ ಉಜಿರೆ
ಘಟಕದ ಸತ್ಸಂಗ ಪ್ರಮುಖ್ ಹರೀಶ್ ಗುರಿಪಳ್ಳ ರವರು
ಚಿಕಿತ್ಸೆ ಫಲಕಾರಿಯಾಗದೆ ಫೆ.9 ರಂದು ನಿಧನರಾದರು.
ಹರೀಶ್ ರವರು ಜ. 22 ರಂದು ಬಣ್ ಕಲ್ ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ
ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೇ
ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.