ಪುತ್ತೂರು: ‘ಶ್ರೀ ಮಹಾಲಿಂಗೇಶ್ವರ ಫೈನಾನ್ಸ್’ ಪುತ್ತೂರಿನ ಮುಖ್ಯ ರಸ್ತೆಯ ಕೆ. ಪಿ. ಕಾಂಪ್ಲೆಕ್ಸ್ ನಲ್ಲಿ ಫೆ.6 ರಂದು ಶುಭಾರಂಭಗೊಂಡಿತು.
ಪ್ರಕಾಶ್ ಜುವೆಲರ್ಸ್ ನ ಮಾಲಕರಾದಂತಹ ಉಮೇಶ್ ಗ್ಲಾಮ್ ಸ್ಟುಡಿಯೋ ಮಾಲಕರಾದ ಸಂತೋಷ್ ರೈ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಂಸ್ಥೆಯನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭರತ್ ಬೆಂಗಳೂರು, ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ಪ್ರಭು, ವಿಶಾಲ್, ಎಂ.ಆರ್.ಜಿ. ಬೆಂಗಳೂರು ಇದರ ವಿಕಾಸ್ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಮಿತ ಬಡ್ಡಿದರದಲ್ಲಿ ಸಾಲ ಸೌಲಭ್ಯ ಹಾಗೂ ಚಿನ್ನಾಭರಣದ ಮೇಲೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು ಎಂದು ಸಂಸ್ಥೆಯ ಮಾಲಕರಾದಂತಹ ಶರತ್ ಪಿ. ಮತ್ತು ಸಚಿನ್ ರೈ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.