ವಿಟ್ಲ: ವೀರಕಂಭ ಪಂ.ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಹಾಗೂ ಸತ್ತ ಕೋಳಿ, ದನದ ಅಂಗಾಗಳನ್ನು ಎಸೆಯುತ್ತಿದ್ದರೂ ಪಂ.ಆಡಳಿತ ಹಾಗೂ ಸದಸ್ಯರು ಎಚ್ಚೆತ್ತುಕೊಂಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪಂ.ವ್ಯಾಪ್ತಿಯಲ್ಲಿ ಹಾದುಹೋಗುವ ಅಂತರ್ರಾಜ್ಯ ಹೆದ್ದಾರಿಯ ವಿಟ್ಲ-ಕಲ್ಲಡ್ಕ ರಸ್ತೆಯ ಕೆಲಿಂಜ ಕೊಟ್ಟಾರಿಕಟ್ಟೆ ತೋಡಿನಲ್ಲಿ ಹಾಗೂ ರಸ್ತೆ ಬದಿಯಲ್ಲಿ ಬೇಕಾಬಿಟ್ಟಿಯಾಗಿ ತ್ಯಾಜ್ಯ ಎಸೆಯುತ್ತಿದ್ದಾರೆ. ಪರಿಸರವಿಡೀ ದುರ್ನಾತ ಬೀರುತ್ತಿರುವ ಕಾರಣ ಸ್ಥಳೀಯರು ವಿರಕಂಬ ಪಂ.ಗೆ ಹಾಗೂ ಸ್ಥಳೀಯ ಸದಸ್ಯರಿಗೆ ಸಿಸಿಟಿವಿ ಅಳವಡಿಸುವಂತೆ ಹಲವಾರು ಬಾರಿ ದೂರು ನೀಡಿದ್ದಾರೆ.
ಇಂದು, ನಾಳೆ ಎಂದು ಸಾಗು ಹಾಕುತ್ತಿರುವ ಪಂಚಾಯತ್ ನ ಬೇಜವಾಬ್ದಾರಿ ವಿರುದ್ಧ ಪರಿಸರ ನಿವಾಸಿಗಳು ಆಕ್ರೋಶಗೊಂಡಿದ್ದು, ತಕ್ಷಣವೇ ಸ್ಪಂದಿಸದಿದ್ದಲ್ಲಿ ಪಂ.ಮುಂದೆ ಪ್ರತಿಭಟನೆ ನಡೆಸುತ್ತೇವೆಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.