Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

    ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

    ಪೆರುವಾಯಿ: ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಶಾಸಕರಿಗೆ ಸನ್ಮಾನ..!!

    ಪೆರುವಾಯಿ: ರಸ್ತೆ ನಿರ್ಮಾಣಕ್ಕೆ ಗುದ್ದಲಿಪೂಜೆ, ಶಾಸಕರಿಗೆ ಸನ್ಮಾನ..!!

    ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!

    ಸ್ಕೂಟರ್ ಅಪಘಾತ: ವಿದ್ಯಾರ್ಥಿ ಮೃತ್ಯು..!!

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಪಲ್ಟಿ; ಚಾಲಕ, ನಿರ್ವಾಹಕ ಪಾರು..!

    ಚಾರ್ಮಾಡಿ ಘಾಟಿಯಲ್ಲಿ ಲಾರಿ ಪಲ್ಟಿ; ಚಾಲಕ, ನಿರ್ವಾಹಕ ಪಾರು..!

    ನಕಲಿ ಪಾಸ್‌ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

    ನಕಲಿ ಪಾಸ್‌ಪೋರ್ಟ್ ಪ್ರಕರಣ: 6 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ..!!

    ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು..!

    ಅಡಿಕೆ ಕೊಯ್ಯುತ್ತಿದ್ದ ವೇಳೆ ವಿದ್ಯುತ್ ತಂತಿಗೆ ದೋಟಿ ತಾಗಿ ವ್ಯಕ್ತಿ ಸಾವು..!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ಧಾರ್ಮಿಕ

(ಫೆ.16-18) ಕುಕ್ಕಾಜೆ: ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ (ರಿ.) ವಾರ್ಷಿಕ ಜಾತ್ರಾ ಮಹೋತ್ಸವ

February 15, 2022
in ಧಾರ್ಮಿಕ, ಬಂಟ್ವಾಳ
0
(ಫೆ.16-18) ಕುಕ್ಕಾಜೆ: ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದಲ್ಲಿ (ರಿ.) ವಾರ್ಷಿಕ ಜಾತ್ರಾ ಮಹೋತ್ಸವ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ವಿಟ್ಲ: ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವವು ಫೆ.16 ರಿಂದ ಫೆ.18ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

Advertisement
Advertisement

ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನ ದಂತೆ ವಾರ್ಷಿಕ ಜಾತ್ರಾ ಮಹೋತ್ಸವವು ನಡೆಯಲಿದೆ. ಫೆ. 16 ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಶ್ರೀದೇವಿಯ ಕಲಶಪ್ರತಿಷ್ಠೆ, ಉದಯಪೂಜೆ ಬಳಿಕ ವಿವಿಧ ತಂಡದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.17 ರಂದು ಬೆಳಿಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಉದಯಪೂಜೆ, ಶ್ರೀ ನರಸಿಂಹ ಮಂಡಲ ಪೂಜೆ, ಕಲಶಸ್ನಾನ, ತುಲಾಭಾರ ಸೇವೆ, ಶ್ರೀದೇವಿಯ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಅಲಂಕಾರ ಪೂಜೆ, ಹೂವಿನಪೂಜೆ, ಪ್ರಸಾದ ವಿತರಣೆ, ರಾತ್ರಿ ಶ್ರೀ ಆಂಜನೇಯ ಮಹಾಪೂಜೆ. ನಾಗ ದರ್ಶನ, ಶ್ರೀ ದೇವಿಯ ಮಹಾಪೂಜೆ ಬಲಿ ಉತ್ಸವ ಪಲ್ಲಕ್ಕಿ ಉತ್ಸವ, ಸಿಡಿ ಮದ್ದು ಪ್ರದರ್ಶನ, ಶ್ರೀ ಸಿರಿಕುಮಾರ ಸ್ವಾಮೀಯ ಮಹಾಪೂಜೆ, ಕುಮಾರಸೇವೆ,ಪ್ರಸಾದ ವಿತರಣೆ, ಬಳಿಕ ರಕ್ತೇಶ್ವರಿ ದೈವದ ನೇಮೋತ್ಸವ ಪ್ರಸಾದ ವಿತರಣೆ ನಡೆಯಲಿದೆ.

Advertisement
Advertisement
Advertisement

ಫೆ.18 ರಂದು ಬೆಳಗ್ಗೆ ಸ್ಥಳಶುದ್ಧಿ, ಗಣಪತಿಹೋಮ, ಭಜನೆ, ಮಧ್ಯಾಹ್ನ ಶ್ರೀದೇವಿಯ ಮಹಾಪೂಜೆ, ದರ್ಶನಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ ದೀಪಾರಾಧನೆ ನಡೆಯಲಿದೆ.

Advertisement

ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಸಂಸ್ಥಾಪಕ, ಆರಾಧಕರೂ ಆಗಿದ್ದ ಧರ್ಮದರ್ಶಿ ತನಿಯಪ್ಪ ಪೂಜಾರಿಯವರು ಪರಂಪರಾಗತ ಆರಾಧನಾ ಹಿನ್ನಲೆಯಿರುವ ಕುಟುಂಬದವರು. ಖ್ಯಾತ ನಾಟಿ ವೈದ್ಯರಾಗಿದ್ದ ಗುರಿಕಾರ ದಿ| ತ್ಯಾಂಪ ಪೂಜಾರಿ ಮತ್ತು ಅಕ್ಕು ಪೂಜಾರ್‍ತಿಯ ಪುತ್ರ.

ಕ್ಷೇತ್ರದ ಸಂಸ್ಥಾಪಕರೂ, ಧರ್ಮದರ್ಶಿಗಳಾಗಿದ್ದ ತನಿಯಪ್ಪ ಪೂಜಾರಿಯವರು ಬಡಕುಟುಂಬದ ಹಿನ್ನೆಲೆಯಿದ್ದವರಾಗಿದ್ದರು. ತಂದೆ ತಾಯಿ ಕುಟುಂಬ ಪುತ್ರ ಸಂತಾನದ ಅಪೇಕ್ಷೆಯಿಂದ ತಮ್ಮ ಧರ್ಮದೈವ ಧೂಮಾವತಿಯನ್ನು ದೀಪ ಹಚ್ಚಿ ಪ್ರಾರ್ಥಿಸುತ್ತಾರೆ. ಪೂರ್ವದಲ್ಲಿ ಇವರ ಕುಟುಂಬವು ಮಂತ್ರ ತಂತ್ರ ವಿದ್ಯೆಯಿಂದ ಸನ್ಯಾಸಿ ಯೋಗವನ್ನು ಪಡೆದು ಲೋಕಕಲ್ಯಾಣ ಮಾಡುತ್ತಿದ್ದ ಕುಟುಂಬವಾಗಿತ್ತು. ತಾಯಿಯ ಪ್ರಾರ್ಥನೆಯಂತೆ ಅವರಿಗೆ ಗಂಡುಮಗುವಿನ ಜನನವಾಗುತ್ತದೆ. ತನಿಯಪ್ಪ ಪೂಜಾರಿಯವರು ಬಾಲ್ಯದಿಂದಲೇ ಜಪತಪ, ಧ್ಯಾನದಲ್ಲಿ ಆಸಕ್ತರಾಗಿದ್ದರು. ಹಿರಿಯರಿಂದ ಅನೇಕ ಗ್ರಂಥಗಳ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು.

ಹಿರಿಯರ ಆಶೀರ್ವಾದ ಹಾಗೂ ಗ್ರಂಥ ಅಧ್ಯಯನ ದ ಅಪೇಕ್ಷೆ ಯಿಂದ ಶಕ್ತಿ ಕ್ಷೇತ್ರ ವಾದ ಕೊಲ್ಲೂರಿನ ಕೊಡಚಾದ್ರಿ ಗೆ ಹೋದ ಸಮಯದಲ್ಲಿ ಕಾಲ ನಿರ್ಣಯವೆಂಬಂತೆ ಗೋಕರ್ಣ ಕ್ಷೇತ್ರ ದಲ್ಲಿ ಪೂಜೆ ನಿರತರಾಗಿದ್ದು ಧರ್ಮಕ್ಷೇತ್ರ ನಿರ್ಮಾಣ ದ ಅತೀವ ಉದ್ದೇಶವನ್ನು ಹೊಂದಿದ್ದ ವಿಶ್ವಕರ್ಮ ಗೋತ್ರದ ಮಹಾ ತಪಸ್ವಿಯೋರ್ವರು ಕೊಡಚಾದ್ರಿ ಯಲ್ಲಿ ಮೋಕ್ಷ ಪ್ರಾಪ್ತಿಗಾಗಿ ತಪೋನಿರತರಾಗಿದ್ದರು ಈ ಸಮಯದಲ್ಲಿ ತನ್ನ ಧರ್ಮ ಉದ್ದೀಪನ ದ ಕಾರ್ಯಕ್ಕೆ ಸೂಕ್ತ ವ್ಯೆಕ್ತಿಯ ನಿರೀಕ್ಷೆ ಯಲ್ಲಿದ್ದರು ಇದೇ ಸಮಯದಲ್ಲಿ ತನಿಯಪ್ಪ ಪೂಜಾರಿ ಯವರನ್ನು ಕಂಡು ಈ ಕಾರ್ಯಕ್ಕೆ ಸೂಕ್ತ ವ್ಯಕ್ತಿಯೆಂದು ಪರಿಗಣಿಸಿ ಮನೋಭಿಲಾಷೆಯನ್ನು ತಿಳಿಸಿ ಆಶೀರ್ವಾದ ಮಾಡಿದರು. ತನಿಯಪ್ಪ ಪೂಜಾರಿಯವರು ಎಳೆಯ ವಯಸ್ಸಿನಲ್ಲಿಯೇ ಧರ್ಮ, ಪುರಾಣ, ಗ್ರಂಥಗಳ ಅಧ್ಯಯನದಲ್ಲಿ ಆಸಕ್ತರಾಗಿ ದೈವಾಂಶಸಂಭೂತರಂತೆ ಕಂಡಿದ್ದರು. ಕಾಲಕ್ರಮೇಣ ಕೊಲ್ಲೂರಿಗೆ ಹೋಗಿ ಬಂದು ತಪಸ್ವಿಯ ಜ್ಞಾನಾನುಗ್ರಹದಿಂದ ಬಳಿಕ ಮನೆಯಲ್ಲಿಯೇ ದೇವಿಯ ಆರಾಧನೆ ಆರಂಭಿಸುತ್ತಾರೆ.

ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ತನಿಯಪ್ಪ ಪೂಜಾರಿಯವರ ಜೀವನದಲ್ಲಿ ನಡೆದ ಘಟನೆಗಳು ದೇವೀ ಶಕ್ತಿಯಿಂದ ಪ್ರಭಾವಿತವಾದುದು ಎಂದು ಕಂಡುಬಂದಿದೆ. ಕಾಲಕ್ರಮೇಣ ಧರ್ಮದರ್ಶಿ ತನಿಯಪ್ಪ ಪೂಜಾರಿಯವರ ಕಾಲಾನಂತರ ಅವರ ಹಿರಿಯ ಪುತ್ರ ಡಾ.ವಿಶ್ವನಾಥ ಕುಕ್ಕಾಜೆಯವರು ಕ್ಷೇತ್ರದ ಧರ್ಮದರ್ಶಿಗಳಾಗಿದ್ದರು. ಅವರ ಕಾಲಾನಂತರ ತನಿಯಪ್ಪ ಪುಜಾರಿಯವರ ಕಿರಿಯ ಪುತ್ರ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಕುಕ್ಕಾಜೆ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಸರ್ವಾಭಿವೃದ್ಧಿಯ ರೂವಾರಿಯಾಗಿ, ಕ್ಷೇತ್ರದ ಭಕ್ತರಿಗೆ ದೇವಿಯ ದರ್ಶನ ಭಾಗ್ಯ, ಪ್ರಸಾದವನ್ನು ನೀಡಿ ಕಷ್ಟಕಾರ್ಪಣ್ಯಗಳನ್ನು ಪರಿಹರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಫೆ.17ರಂದು ರಾತ್ರಿ ಲಯನ್ ಕಿಶೋರ್ ಡಿ. ಶೆಟ್ಟಿರವರ ಲಕುಮಿ ತಂಡದ ಕುಸಲ್ದ ಕಲಾವಿದರಿಂದ ‘ಎನ್ನ ಬಂಗ ಎಂಕೇ ಗೊತ್ತು’ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ಫೆ.18ರಂದು ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರಾತ್ರಿ 8ರಿಂದ ಮಂತ್ರ ನಾಟ್ಯಾಲಯ ಗುರುಕುಲ ಉಳ್ಳಾಲ ಪ್ರಸ್ತುತ ಪಡಿಸುವ ‘ ಶ್ರೀ ದೇವಿ ನಮಸ್ತುಭ್ಯಂ’ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆಯ ಮಕ್ಕಳಿಂದ ಭರತನಾಟ್ಯ ನಡೆಯಲಿದೆ. ಬಳಿಕ ಶ್ರೀ ವಿಷ್ಣುಮೂರ್ತಿ ಜನಾರ್ಧನ ಯಕ್ಷಗಾನ ಅಧ್ಯಯನ ಟ್ರಸ್ಟ್ ಮಂಜಿನಾಡಿಯ ಬಾಲ ಕಲಾವಿದರಿಂದ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಜಗದೀಶ್ ಎಸ್.ಗಟ್ಟಿ ನಿರ್ದೇಶನದ ‘ಶಾಂಭವಿ ವಿಲಾಸ’ ಯಕ್ಷಗಾನಬಯಲಾಟ ನಡೆಯಲಿದೆ.

ಕ್ಷೇತ್ರದಲ್ಲಿ ನಾಳೆಯಿಂದ ಫೆ.18ರ ವರೆಗೆ ವರ್ಷಾವಧಿ ಜಾತ್ರೋತ್ಸವ ನಡೆಯಲಿದೆ. ಸಂತಾನಪ್ರಾಪ್ತಿಗಾಗಿ, ವಿವಾಹಕ್ಕೆ ಸಂಬಂಧಿಸಿ, ಚರ್ಮವ್ಯಾಧಿ, ಕ್ಯಾನ್ಸರ್ ನಂತಹ ಭಯಾನಕ ರೋಗಗಳ ಶಮನಕ್ಕಾಗಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥಿಸಿ ತುಲಾಭಾರ ಸೇವೆ ನೀಡಿದಲ್ಲಿ ತಾಯಿ ಅನುಗ್ರಹ ನೀಡಿ ಸರಿಪಡಿಸಿದ ಹಲವಾರು ನಿದರ್ಶನಗಳಿವೆ. ಅದೇ ರೀತಿ ಹೊಟ್ಟೆಯ ಒಳಗಿನ ರೋಗಗಳಿಗೆ ಕ್ಷೇತ್ರದಲ್ಲಿ ಕುಂಕುಮಾರ್ಚನೆ ಮಾಡಿಸಿ ತಾಯಿಯ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡಿದರೆ ಅದು ಶಮನವಾದ ಹಲವಾರು ನಿದರ್ಶನಗಳಿವೆ. ತಾಯಿಯ ಲೀಲೆಯಿಂದ ಫಲಕಂಡುಕೊಂಡ ಊರ ಪರವೂರ ಸಹಿತ ಹೊರ ರಾಜ್ಯದ ಹಲವಾರು ಭಕ್ತಾದಿಗಳು ಕ್ಷೇತ್ರಕ್ಕೆ ಬಂದು ತಾಯಿಯ ದರುಶನ ಪಡೆದುಕೊಳ್ಳುತ್ತಾರೆ.

Previous Post

ಎಲ್ಲೆಂದರಲ್ಲಿ ತ್ಯಾಜ್ಯಗಳ ರಾಶಿ, ಪ್ರಾಣಿಗಳ ಅಂಗಾಂಗ.!! ವೀರಕಂಭ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆಗೆ ಗ್ರಾಮಸ್ಥರ ಹಿಡಿಶಾಪ.!!!

Next Post

ಬರೀ ಸೇಫ್ಟಿ ಪಿನ್​ ಬಳಸಿ 15 ಲಕ್ಷ ಮೌಲ್ಯದ ಬೈಕ್​ಗಳ ಕಳ್ಳತನ:; ಇಬ್ಬರು ಖತರ್ನಾಕ್​​ ಕಳ್ಳರ ಬಂಧನ..!!

OtherNews

(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!
ಧಾರ್ಮಿಕ

(ಡಿ.12,13)ರಂದು ಪುತ್ತೂರಿನಲ್ಲಿ ಗಿರಿಜಾ ಕಲ್ಯಾಣೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ..!

October 4, 2026
ಪುತ್ತೂರು : ಬಸ್ ಮಾರ್ಗ ಬದಲಾವಣೆ: ವಿದ್ಯಾರ್ಥಿಯ ಉಚಿತ ಪ್ರಯಾಣ ಸೌಲಭ್ಯ ನಿರಾಕರಣೆ; ಮುಖ್ಯಮಂತ್ರಿಗೆ ದೂರು..!
ಕ್ರೈಮ್

ಬಂಟ್ವಾಳ: ನ್ಯಾಯಾಂಗ ವ್ಯವಸ್ಥೆ ಅಪಮಾನ ಆರೋಪ : ವಕೀಲ ಪ್ರಸಾದ್ ವಿರುದ್ಧ ದೂರು..!

September 29, 2026
ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!
Featured

ಧಾರ್ಮಿಕ ಕಾರ್ಯಕ್ರಮ ಯಾರೇ ಮಾಡಿದರೂ ಭಾಗವಹಿಸುತ್ತೇನೆ- ಡಾ. ರಘು ಬೆಳ್ಳಿಪ್ಪಾಡಿ…!

September 29, 2026
ಪುತ್ತೂರಿನಲ್ಲಿ ಡಿ.12, 13ರಂದು ಗಿರಿಜಾ ಕಲ್ಯಾಣೋತ್ಸವ: ಪೂರ್ವಭಾವಿ ಸಭೆ..!!
ಧಾರ್ಮಿಕ

ಪುತ್ತೂರಿನಲ್ಲಿ ಡಿ.12, 13ರಂದು ಗಿರಿಜಾ ಕಲ್ಯಾಣೋತ್ಸವ: ಪೂರ್ವಭಾವಿ ಸಭೆ..!!

September 28, 2026
ಮಾಣಿ: ಫ್ಲೈಓವರ್ ರಸ್ತೆಯಲ್ಲಿ ಭೀಕರ ಅಪಘಾತ; ಮಹಿಳೆ ಮೃತ್ಯು, ಮೂವರಿಗೆ ಗಂಭೀರ ಗಾಯ..!
ಕ್ರೈಮ್

ಮಾಣಿ: ಫ್ಲೈಓವರ್ ರಸ್ತೆಯಲ್ಲಿ ಭೀಕರ ಅಪಘಾತ; ಮಹಿಳೆ ಮೃತ್ಯು, ಮೂವರಿಗೆ ಗಂಭೀರ ಗಾಯ..!

September 28, 2026
ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!
ಕ್ರೈಮ್

ಬಂಟ್ವಾಳ: ತಲವಾರು, ಕಬ್ಬಿಣದ ರಾಡ್‌ನಿಂದ ಹಲ್ಲೆ; ಮೂವರು ಆರೋಪಿಗಳ ಬಂಧನ..!

September 26, 2026

Leave a Reply Cancel reply

Your email address will not be published. Required fields are marked *

Recent News

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್..!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ಚಿಕ್ಕಣ್ಣ, ಯಶಸ್ ಸೂರ್ಯಗೆ ಕೋರ್ಟ್ ಸಮನ್ಸ್..!

October 8, 2026
ಆನ್‌ಲೈನ್ ಗೇಮ್‌ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ : ಮನನೊಂದು ನೇಣಿಗೆ ಶರಣಾದ ಬಾಲಕ

ಆನ್‌ಲೈನ್ ಗೇಮ್‌ಗೆ ಸ್ನೇಹಿತರಿಂದ ಹಣಕ್ಕಾಗಿ ಟಾರ್ಚರ್ : ಮನನೊಂದು ನೇಣಿಗೆ ಶರಣಾದ ಬಾಲಕ

October 8, 2026
ಲಾಡ್ಜ್​​ನಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರ ಬಂಧನ: ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಾಯ್ಬಿಟ್ಟ ಯುವತಿ..!

ಲಾಡ್ಜ್​​ನಲ್ಲಿ ಗಾಂಜಾ ಸೇವಿಸುತ್ತಿದ್ದ ನಾಲ್ವರ ಬಂಧನ: ವಿಚಾರಣೆ ವೇಳೆ ಸ್ಫೋಟಕ ವಿಚಾರ ಬಾಯ್ಬಿಟ್ಟ ಯುವತಿ..!

October 8, 2026
ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

ಬೈಕ್ ಖರೀದಿಸಿ ಬರುತ್ತಿದ್ದಾಗ ಭೀಕರ ಅಪಘಾತ ; ಇಬ್ಬರು ಸ್ನೇಹಿತರು ದುರ್ಮರಣ..!

October 8, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.